ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಿತಿಯರಿತು ಅನುಭವಿಸಿದರೆ ಸೆಕ್ಸ್ ಕೆಟ್ಟದಲ್ಲ: ಸ್ವಾಮಿ ರಾಮದೇವ್ (free sex | yoga & ayurveda expert | Swami Ramdev | Spirituality)
Bookmark and Share Feedback Print
 
ಮಿತಿಯೊಳಗೆ ಜವಾಬ್ದಾರಿಯನ್ನು ಅರಿತುಕೊಂಡು ಅನುಭವಿಸಿದರೆ ಲೈಂಗಿಕತೆ ಕೆಟ್ಟದಲ್ಲ, ಅದೇ ರೀತಿ ಲೈಂಗಿಕತೆ ಎನ್ನುವುದು ಮುಕ್ತವಲ್ಲ ಎಂದು ಯೋಗ ಮತ್ತು ಆಯುರ್ವೇದ ಗುರು ಎಂದು ಖ್ಯಾತಿ ಪಡೆದಿರುವ ಸ್ವಾಮಿ ರಾಮದೇವ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ 'ಲೈಂಗಿಕತೆ ಮತ್ತು ಆಧ್ಯಾತ್ಮ' ಎಂಬ ಕುರಿತ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಅವರು, ಸೆಕ್ಸ್ ಎನ್ನುವುದನ್ನು ಯಾವುದೇ ಮಿತಿಯಿಲ್ಲದೆ ಅಳವಡಿಸಿಕೊಳ್ಳಲು ಹೋದರೆ ಅದು ದುರಂತ ಸನ್ನಿವೇಶಗಳಿಗೆ ಕಾರಣವಾಗಬಹುದು ಎಂದರು.
PTI


ಮುಕ್ತ ಲೈಂಗಿಕತೆಯಿಂದಾಗಿ ಎಚ್ಐವಿ, ಜನಸಂಖ್ಯಾ ಸ್ಫೋಟ ಮತ್ತು ಹದಿಹರೆಯದಲ್ಲಿ ಗರ್ಭವತಿಯರಾಗುವುದು ಮುಂತಾದ ಗಂಭೀರ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ ಮಗುವೊಂದು ಹುಟ್ಟಿದಾಗ ಅದರಲ್ಲಿ ತಂದೆಯ ಪಾಲು ಎಷ್ಟು ಎಂಬುದನ್ನು ತಿಳಿಯಲು ಡಿಎನ್ಎ ಪರೀಕ್ಷೆಯ ಸಹಾಯವನ್ನು ಪಡೆಯಬೇಕಾದ ಅನಿವಾರ್ಯತೆ ಬರಬಹುದು ಎಂದು ನುಡಿದರು.

ಕಾನೂನು ಸಮ್ಮತವಲ್ಲದ ಲೈಂಗಿಕತೆ ಮತ್ತು ಮುಕ್ತ ಲೈಂಗಿಕತೆಯನ್ನು ವಿನೋದ ಮತ್ತು ಮನರಂಜನೆ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಲೈಂಗಿಕತೆ ಮತ್ತು ಆಧ್ಯಾತ್ಮ ಎರಡೂ ಓರ್ವ ವ್ಯಕ್ತಿಯ ಆಂತರಿಕ ವಾಂಛೆಗಳು. ಆದರೆ ಇಲ್ಲಿ ಮುಕ್ತ ಲೈಂಗಿಕತೆ ಎಂಬುದು ಇಲ್ಲ. ಈ ಜಗತ್ತಿನಲ್ಲಿ ಯಾವುದೂ ಮುಕ್ತವಲ್ಲ ಎಂದು ಯೋಗಗುರು ತನ್ನ ಅನಿಸಿಕೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಧಾರ್ಮಿಕ ವಿದ್ವಾಂಸ ಮತ್ತು ದಾರ್ಶನಿಕ ಸ್ವಾಮಿ ಸತ್ಯ ವೇದಾಂತ್, ಸೆಕ್ಸ್ ಎನ್ನುವುದು ಆಧ್ಯಾತ್ಮದೊಂದಿಗೆ ಆಂತರಿಕ ಸಂಬಂಧ ಹೊಂದಿದೆ; ಆದರೆ ಅದರ ಸಂಬಂಧವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದರು.

ಲೈಂಗಿಕತೆ ಎನ್ನುವುದು ದೇವರ ಪವಿತ್ರ ಕೊಡುಗೆ. ಆದರೆ ಇದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಆ ಸಂಬಂಧವನ್ನು ಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವೇದಾಂತ್ ಅಭಿಪ್ರಾಯಪಟ್ಟರು.

ಓಶೋ ರಜನೀಶ್ ಅವರ ಸೆಕ್ಸ್ ಬಗೆಗಿನ ದೃಷ್ಟಿಕೋನವನ್ನು ವಿವರಿಸಿದ ಅವರು, ಅವರ ಪ್ರಕಾರ ಸೆಕ್ಸ್‌ ಎನ್ನುವುದು ಸಹಜವಾಗಿ ಬದುಕುವುದು. ಸೆಕ್ಸನ್ನು ಸಹಜ ಮತ್ತು ಆರೋಗ್ಯಪೂರ್ಣವಾಗಿ ಸ್ವೀಕರಿಸಿದರೆ, ಆತ ಮಹೋನ್ನತ ಮಟ್ಟವನ್ನು ಮುಟ್ಟಲು ಸಾಧ್ಯವಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ