ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸಚಿವರು, ಸಂಸದರು ಕೇವಲ ಖಾದಿಯನ್ನು ಮಾತ್ರ ತೊಡಬೇಕು' (Ministers | khadi | Dinsha Patel | Lok Sabha)
Bookmark and Share Feedback Print
 
WD
ಲೋಕಸಭಾ ಸದಸ್ಯರು ಮತ್ತು ಕೇಂದ್ರ ಸಚಿವರುಗಳು ಖಾದಿಯನ್ನೇ ತೊಡಬೇಕು ಎಂದು ಆಗ್ರಹಿಸಿರುವ ಕೇಂದ್ರ ಸಚಿವ ದಿನ್ಶಾ ಪಟೇಲ್, ಕನಿಷ್ಠ ಕೈಮಗ್ಗದ ಬಟ್ಟೆಗಳನ್ನಾದರೂ ತೊಡುವಂತೆ ಒತ್ತಾಯಿಸಿದ್ದಾರೆ.

ಲೋಕಸಭೆಯ ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ಸಚಿವ ಪಟೇಲ್, ಸಚಿವರು ಮತ್ತು ಲೋಕಸಭಾ ಸಂಸದರು ಕೇವಲ ಖಾದಿಯನ್ನು ಮಾತ್ರ ತೊಡಬೇಕು ಎಂದರು.

ಖಾದಿ ಬಟ್ಟೆಗಳನ್ನು ತೊಡಲು ಸಾಧ್ಯವಾಗದೇ ಇದ್ದರೆ, ಕನಿಷ್ಠ ಖಾದಿ ಕರವಸ್ತ್ರವನ್ನಾದರೂ ಬಳಸಿ ಎಂದ ಅವರು, ಸಚಿವರು ಮತ್ತು ಸಂಸದರು ಇಂತಹ ಕ್ರಮಕ್ಕೆ ಮುಂದಾದರೆ ಕೈಮಗ್ಗ ಉದ್ಯಮಕ್ಕೆ ಚೇತರಿಕೆ ನೀಡಿದಂತಾಗಬಹುದು. ಆ ಮೂಲಕ ಉದ್ಯಮ ಚಿಗಿತುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಖಾದಿಯ ವಿಸ್ತಾರ ಸುಧಾರಣೆ ಮತ್ತು ಅಭಿವೃದ್ಧಿ ಪಡಿಸಿ ಈ ಕ್ಷೇತ್ರವನ್ನು ಮರುಜೀವಗೊಳಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರವು ಅಂಗೀಕಾರ ನೀಡಿದೆ ಎಂದೂ ಇದೇ ಸಂದರ್ಭದಲ್ಲಿ ಪಟೇಲ್ ಸದನಕ್ಕೆ ತಿಳಿಸಿದ್ದಾರೆ.

ಈ ಕಾರ್ಯಕ್ರಮ ಜಾರಿಯಿಂದ ಖಾದಿ ಅಭಿವೃದ್ಧಿ ಪ್ರಮಾಣ ಹೆಚ್ಚಲಿದ್ದು, ನೇಯ್ಗೆಕಾರರ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ. ಗ್ರಾಮೀಣ ಕೈಗಾರಿಕೆಗಳು ಕೂಡ ಇದರಿಂದ ವೃದ್ಧಿ ಕಾಣಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ