ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಎಸ್ಐ ಭೀತಿ; ಪಾಕಿಸ್ತಾನ ತೊರೆಯಲಿರುವ ದಾವೂದ್ ಗ್ಯಾಂಗ್! (Dawood Ibrahim | Pakistan | Hamza | India)
Bookmark and Share Feedback Print
 
ಡಿ-ಗ್ಯಾಂಗ್‌ನ ಚಟುವಟಿಕೆಗಳಲ್ಲಿ ಐಎಸ್ಐ ಮಧ್ಯಪ್ರವೇಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು ತಮ್ಮ ಕುಟುಂಬಗಳನ್ನು ಪಾಕಿಸ್ತಾನದಿಂದ ಹೊರಗಿನ ಸುರಕ್ಷಿತ ರಾಷ್ಟ್ರವೊಂದಕ್ಕೆ ಕಳುಹಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಯಿಂದ ತೀವ್ರ ಒತ್ತಡ ಹಾಗೂ ನಿರ್ಬಂಧಗಳನ್ನು ಎದುರಿಸುತ್ತಿರುವ 'ಡಿ ಕಂಪನಿ' ತಮ್ಮ ಪರಿವಾರವನ್ನು ಶಾಶ್ವತವಾಗಿ ಬೇರೊಂದು ದೇಶಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿದೆ. ದಕ್ಷಿಣ ಆಫ್ರಿಕಾಕ್ಕೆ ಹೋಗುವ ಬಗ್ಗೆ ಹೆಚ್ಚಿನ ಒಲವು ತೋರಲಾಗಿದೆ ಎಂದು ಆಂಗ್ಲ ದಿನಪತ್ರಿಕೆ 'ಡಿಎನ್ಎ' ತನ್ನ ವರದಿಯಲ್ಲಿ ಹೇಳಿದೆ.
PR

ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗಿನ ಒಳಗೆ ನಡೆಯುತ್ತಿರುವ ಈ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದು ಸ್ವತಃ ಆತನ ಆಪ್ತ ಸಹಚರ ಫಿರೋಜ್ ಅಬ್ದುಲ್ ರಷೀದ್ ಖಾನ್ ಆಲಿಯಾಸ್ ಹಂಝ.

1993ರ ಮುಂಬೈ ಸರಣಿ ಸ್ಫೋಟದಲ್ಲಿ ಆರೋಪಿಯಾಗಿರುವ ಹಂಝನನ್ನು ಇತ್ತೀಚೆಗಷ್ಟೇ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು, ಈ ಸಂದರ್ಭದಲ್ಲಿ ಆತ ಹಲವು ಪ್ರಮುಖ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ.

ದಾವೂದ್, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ ಮತ್ತು ಟೈಗರ್ ಮೆಮೊನ್ ತಮ್ಮ ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಸುರಕ್ಷಿತ ಸ್ಥಳದ ಹುಡುಕಾಟದಲ್ಲಿದ್ದಾರೆ. ಅವರು ಐಎಸ್ಐ ನಿಯಂತ್ರಣದಿಂದ ಹೊರಗೆ ಬರಲು ಯತ್ನಿಸುತ್ತಿದ್ದಾರೆ ಎಂದು ಹಂಝ ತಿಳಿಸಿದ್ದಾನೆಂದು ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಭಾರತಕ್ಕೆ ಬೇಕಾಗಿರುವ ಈ ಹೈ-ಪ್ರೊಫೈಲ್ ಕ್ರಿಮಿನಲ್‌ಗಳ ಕುಟುಂಬಸ್ಥರಿಗೆ ಪ್ರಸಕ್ತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲಿ ಪ್ರತೀ ದಿನ ಎಂಬಂತೆ ನಡೆಯುತ್ತಿರುವ ಬಾಂಬ್ ಸ್ಫೋಟ ಮುಂತಾದ ಕೃತ್ಯಗಳು ಕುಖ್ಯಾತ ಕ್ರಿಮಿನಲ್‌ಗಳಿಗೂ ಈ ನೆಲ ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದೆ. ಅದಕ್ಕಿಂತಲೂ ಹೆಚ್ಚಾಗಿ ಐಎಸ್ಐ ಒತ್ತಡವೇ ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಈ ವ್ಯಕ್ತಿಗಳು ದೇಶದಿಂದ ಹೊರಗೆ ಹೋಗಲು ಬಯಸಿದರೆ ಅದಕ್ಕೆ ಪ್ರತಿಯಾಗಿ ಅವರು ಕುಟುಂಬಿಕರು ಪಾಕಿಸ್ತಾನದಲ್ಲೇ ಉಳಿದುಕೊಳ್ಳುವುದು ಕಡ್ಡಾಯವಾಗುತ್ತದೆ. ದಾವುದ್ ಮತ್ತು ಆತನ ಸಹಚರರು ತಮ್ಮ ಕುಟುಂಬವನ್ನು ಸ್ಥಳಾಂತರಗೊಳಿಸಿದರೆ, ಅವರು ಪಾಕಿಸ್ತಾನದಲ್ಲೇ ಇರಬೇಕಾಗುತ್ತದೆ. ಅವರು ದೇಶ ಬಿಟ್ಟು ಹೋಗುವುದು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಛೋಟಾ ರಾಜನ್ ಗ್ಯಾಂಗ್ ಮತ್ತು ಇತರ ಎದುರಾಳಿ ಗುಂಪುಗಳಿಂದ ಬೆದರಿಕೆ ಇರುವುದರಿಂದ ದಾವೂದ್ ಪಶ್ಚಿಮ ಏಷಿಯಾ ರಾಷ್ಟ್ರಗಳಲ್ಲಿ ನೆಲೆಸಲು ಬಯಸುತ್ತಿಲ್ಲ ಎಂದೂ ಹಂಝ ತಿಳಿಸಿದ್ದಾನೆಂದು ಕ್ರೈಂ ಬ್ರಾಂಚ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ