ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಷೇಧ ಉಲ್ಲಂಘಿಸಿ ಕಂಧಮಾಲ್ ಪ್ರವೇಶಿಸಲಿರುವ ತೊಗಾಡಿಯಾ (VHP leader | Vishwa Hindu Parishad | Praveen Togadia | Kandhamal district)
Bookmark and Share Feedback Print
 
ಒರಿಸ್ಸಾದ ಹಿಂಚಾಚಾರ ಪೀಡಿತ ಜಿಲ್ಲೆ ಕಂಧಮಾಲ್‌ಗೆ ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರ ಮೇಲೆ ಸ್ಥಳೀಯಾಡಳಿತ ನಿಷೇಧ ಹೇರಿದ್ದರೂ, ಅವರು ತನ್ನ ಪ್ರವಾಸವನ್ನು ಮುಂದುವರಿಸಲಿದ್ದಾರೆ.

ತೊಗಾಡಿಯಾ ಅವರ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿಎಚ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಗೌರಿ ಪ್ರಸಾದ್ ರಥ್ ತಿಳಿಸಿದ್ದಾರೆ.

ತೊಗಾಡಿಯಾ ಮತ್ತು ಇತರ ನಾಯಕರು ಇಂದು ಕಂಧಮಾಲ್ ತಲುಪಲಿದ್ದು, ಜಿಲ್ಲೆಯಲ್ಲೇ ಇಂದು ರಾತ್ರಿಯನ್ನು ಕಳೆಯಲಿದ್ದಾರೆ. ಅವರ ಪ್ರವಾಸದಲ್ಲಿ ನಾವು ಯಾವುದೇ ಬದಲಾವಣೆಯನ್ನು ಮಾಡಲು ಇಚ್ಛಿಸುವುದಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.

2008ರ ಆಗಸ್ಟ್ 23ರಂದು ನಡೆದ ಹಿಂದೂ ಧರ್ಮಗುರು ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯ ನಂತರ ಜಿಲ್ಲೆಯಲ್ಲಿ ನಡೆದ ತಿಂಗಳಿಗೂ ಹೆಚ್ಚು ಕಾಲದ ಕೋಮುಗಲಭೆಯಲ್ಲಿ ಕನಿಷ್ಠ 38 ಮಂದಿ ಕಗ್ಗೊಲೆಯಾಗಿದ್ದರು.

ಇಂತಹ ಹಿಂಸಾಚಾರ ಪೀಡಿತ ಜಿಲ್ಲೆ ಪ್ರಸಕ್ತ ಶಾಂತಿಯಿಂದಿದ್ದು, ತೊಗಾಡಿಯಾ ಭೇಟಿಯಿಂದಾಗಿ ಸಮಸ್ಯೆಗಳು ಉದ್ಭವಿಸಬಹುದು ಎಂದು ಜಿಲ್ಲಾಡಳಿತ ಕಳವಳ ವ್ಯಕ್ತಪಡಿಸಿದೆ.

ತೊಗಾಡಿಯಾ ಮತ್ತು ಇತರ ಮೂವರು ಕಂಧಮಾಲ್‌ಗೆ ಪ್ರವೇಶಿಸಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ