ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಹೆಡ್ಲಿಗೆ ಜೀವಾವಧಿ ಶಿಕ್ಷೆಯಾದರೂ ಸಾಕು: ಭಾರತ (India | America | David Coleman Headley | Mumbai attacks)
Bookmark and Share Feedback Print
 
ಮುಂಬೈ ದಾಳಿ ಸಂಚಿನಲ್ಲಿ ಪಾಲ್ಗೊಂಡಿರುವ ಬಗ್ಗೆ ಅಮೆರಿಕಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿಗೆ ಜೀವಾವಧಿ ಶಿಕ್ಷೆ ನೀಡಿದರೆ ಭಾರತ ಸರಕಾರವು ತೃಪ್ತಗೊಳ್ಳಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ತಿಳಿಸಿದ್ದಾರೆ.

ಅಮೆರಿಕಾ ಅಟಾರ್ನಿ ಜನರಲ್ ಅವರು ಹೆಡ್ಲಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಸಲಹೆ ನೀಡಿದ್ದಾರೆ. ಆತ ಜೀವಾವಧಿ ಶಿಕ್ಷೆ ಪಡೆದುಕೊಂಡರೆ ಭಾರತ ಸರಕಾರವು ಅಸಮಾಧಾನಗೊಳ್ಳುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.

ಹೆಡ್ಲಿಯ ವಿಚಾರಣೆ ಅಥವಾ ಆತ ಭಾರತದ ನ್ಯಾಯಾಲಯದ ಮೂಲಕ ಮಾಡಲಿರುವ ಪ್ರಮಾಣದ ಕುರಿತು ಮುಂಬರುವ ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುತ್ತದೆ. ಈ ಬಗ್ಗೆ ಈಗಲೇ ಯಾವುದೇ ಮಾಹಿತಿಯಿಲ್ಲ ಎಂದೂ ತಿಳಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕನಾಗಿರುವ ಹೆಡ್ಲಿ ತಪ್ಪೊಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಿರುವ ಭಾರತ ಸರಕಾರವು, ಆತನ ಜತೆಗಿನ ಅಮೆರಿಕಾ ಸರಕಾರದ ಒಪ್ಪಂದವು ಅಸಮಾಧಾನ ತಂದಿಲ್ಲ ಎಂದು ಸರಕಾರದ ಕೆಲವು ಉನ್ನತ ಮೂಲಗಳು ಹೇಳಿವೆ.

ಅದೇ ಹೊತ್ತಿಗೆ ಅಮೆರಿಕಾದ ಫೆಡರಲ್ ಕಾನೂನಿನಲ್ಲಿ ಮಧ್ಯ ಪ್ರವೇಶಿಸಲು ಭಾರತ ಸರಕಾರ ನಿರಾಕರಿಸಿದ್ದು, ಈ ಬೆಳವಣಿಗೆಯಿಂದ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧದ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂಬ ವಿಶ್ವಾಸದಿಂದಿದೆ. ಮುಂಬರುವ ದಿನಗಳಲ್ಲಿ ಹೆಡ್ಲಿಯನ್ನು ವಿಚಾರಣೆ ನಡೆಸುವ ಮೂಲಕ ಭಯಾನಕ ಮುಂಬೈ ದಾಳಿಯ ಕುರಿತು ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಗುರುವಾರ ಅಮೆರಿಕಾದ ನ್ಯಾಯಾಲಯದಲ್ಲಿ ತನ್ನ ಮೇಲಿದ್ದ ಎಲ್ಲಾ 12 ಆರೋಪಗಳಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡುವ ಮೂಲಕ ಹೆಡ್ಲಿ ಮರಣದಂಡನೆ ಮತ್ತು ಗಡೀಪಾರು ಶಿಕ್ಷೆಯಿಂದ ಪಾರಾಗಿದ್ದಾನೆ. ಆದರೆ ಭಾರತವು ಅಮೆರಿಕಾಕ್ಕೆ ಹೋಗಿ ಆತನ ವಿಚಾರಣೆ ನಡೆಸುವ ಅವಕಾಶವನ್ನು ನೀಡಲಾಗಿದ್ದು, ಈ ಸಂಬಂಧ ಭಾರತವು ತನಗಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಅಮೆರಿಕಾದ ಕಾನೂನುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ