ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ್:ಹಳೆಯ ದ್ವೇಷದಿಂದ ಐವರ ಸಜೀವ ದಹನ (Burnt to death | Bihar | Banka district)
Bookmark and Share Feedback Print
 
ವಾಹನವೊಂದರಲ್ಲಿ ತೆರಳುತ್ತಿದ್ದ ಗ್ರಾಮಸ್ಥರ ಮೇಲೆ ಕೆಲ ಅಪರಿಚಿತರು ದಾಳಿ ನಡೆಸಿದಾಗ, ಗ್ರಾಮದ ಮುಖಂಡ ಸೇರಿದಂತೆ ಐವರು ಸಜೀವವಾಗಿ ದಹನವಾದ ದಾರುಣ ಘಟನೆ ವರದಿಯಾಗಿದೆ.

ಬಂಕಾ ಜಿಲ್ಲೆಯ ಟಿಲ್‌ಕಾರಾ ಗ್ರಾಮಪಂಚಾಯತ್ ಮುಖ್ಯಸ್ಥ ಪ್ರಯಾಗ್ ಯಾದವ್,ಹಾಗೂ ಇತರ ನಾಲ್ಕು ಮಂದಿ ಬೆಂಬಲಿಗರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಗ್ರಾಮ ಝಾಲರ್‌ಗೆ ವಾಹನವೊಂದರಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ, ಕೆಲ ಅಪರಿಚಿತರ ಗುಂಪು, ಬಾಂಬ್‌ ಹಾಗೂ ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ಮೊದಲು ಯಾದವ್ ಅವರ ಸಂಬಂಧಿಯ ಮೇಲೆ ದಾಳಿ ನಡೆಸಿದರು.ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯಾದವ್ ಅವರ ವಾಹನ ಚಾಲಕ ನಿಯಂತ್ರಣ ಕಳೆದುಕೊಂಡನು. ಆರೋಪಿಗಳ ಗುಂಪು ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾಗ ಐವರು ಸಜೀವವಾಗಿ ದಹನವಾದರು ಎಂದು ಕುಮಾರ್ ಹೇಳಿದ್ದಾರೆ.

ಘಟನೆಗೆ ಪ್ರಯಾಗ್ ಯಾದವ್ ಮತ್ತು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಯಾದವ್ ಅವರ ಮಧ್ಯದ ಹಳೆಯ ದ್ವೇಷ ಕಾರಣವಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ವಿನಯ್ ಕುಮಾರ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೀವ ದಹನ, ಬಿಹಾರ್, ಬಂಕಾ ಜಿಲ್ಲೆ