ಕೈಗಾರಿಕೋದ್ಯಮ ಸುಸ್ಥಿತಿಗೆ ಮರಳುತ್ತಿರುವ ಸಂಕೇತಗಳ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಪರಿಷ್ಕರಣ ಸಭೆಯ ನೇತೃತ್ವವನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಯೋಜನಾ ಆಯೋಗದ ಸಭೆಯಲ್ಲಿ 11ನೇ ಪಂಚವಾರ್ಷಿಕ ಯೋಜನೆಗೆ ಮಧ್ಯಂತರ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಪಂಚವಾರ್ಷಿಕ ಯೋಜನೆಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಮಧ್ಯಂತರ ಅನುಮತಿ ನೀಡಿದ ನಂತರ, ನ್ಯಾಷನಲ್ ಡೆವೆಲಪ್‌ಮಂಟ್ ಕೌನ್ಸಿಲ್‌ಗೆ ರವಾನಿಸಲಾಗುತ್ತದೆ.ಕೌನ್ಸಿಲ್ ಮುಂದಿನ ತಿಂಗಳಲ್ಲಿ ಸಭೆ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಯೋಜನಾ ಆಯೋಗಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷರಾಗಿದ್ದು, ವಿತ್ತಸಚಿವ ಪ್ರಣಬ್ ಮುಖರ್ಜಿ, ಕೃಷಿ ಮತ್ತು ಅಹಾರ ಖಾತೆ ಸಚಿವ ಶರದ್ ಪವಾರ್ ಸದಸ್ಯರಾಗಿರುತ್ತಾರೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.