ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯೇಂದ್ರ ದುಬೆ ಹತ್ಯೆ ಪ್ರಕರಣ:ಮೂರು ಮಂದಿ ದೋಷಿಗಳು (Patna court | Satyendra Dubey | IPC | Highways Authority of India)
ದೇಶಾದ್ಯಂತ ತೀವ್ರ ವಿವಾದಕ್ಕೆಡೆಯಾದ ನಿಷ್ಠಾವಂತ ಇಂಜಿನಿಯರ್ ಸತ್ಯೇಂದ್ರ ದುಬೆ ಹತ್ಯೆ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ದೋಷಿ ಎಂದು ಪಾಟ್ನಾ ಹೈಕೋರ್ಟ್ ಸೋಮವಾರ ತೀರ್ಪು ನೀಡಿದ್ದು, ಮಾರ್ಚ್ 27ರಂದು ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಹೇಳಿದೆ.
ದುಬೆ ಹತ್ಯೆ ಪ್ರಕರಣದಲ್ಲಿ ಮಂತು ಕುಮಾರ್, ಉದಯ್ ಕುಮಾರ್ ಹಾಗೂ ಪಿಂಕು ರವಿದಾಸ್ ಸೇರಿದಂತೆ ಮೂರು ಮಂದಿ ದೋಷಿತರು ಎಂದು ಪಾಟ್ನಾ ಹೈಕೋರ್ಟ್ ತಿಳಿಸಿದೆ.
ಮಂತು ಕುಮಾರ್‌ನನ್ನು ಭಾರತೀಯ ದಂಡ ಸಂಹಿತೆ 302, 394, 27(ಎ) ಕಾನೂನಡಿಯಲ್ಲಿ ದೋಷಿ ಎಂದು ಘೋಷಿಸಿದ್ದರೆ, ಇನ್ನಿಬ್ಬರನ್ನು ಐಪಿಸಿ 302/34, 394ಅಡಿಯಲ್ಲಿ ದೋಷಿತರು ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಕಾನ್ಪುರದ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ದುಬೆ ನ್ಯಾಷನಲ್ ಹೈವೇಸ್ ಅಥೋರಿಟಿ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸಿದ್ದರು. 31ರ ಹರೆಯದ ದುಬೆ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಜಾರ್ಖಂಡ್‌ನಲ್ಲಿ ಗೋಲ್ಡನ್ ಕ್ವಾಡ್ರಿಲಾಟೆರಾಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆಯುತ್ತಿರುವುದಾಗಿ ದೂರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ಆ ಪತ್ರದಲ್ಲಿ ದುಬೆ ಹಲವು ಘಟಾನುಘಟಿಗಳ ಹೆಸರನ್ನೂ ಕೂಡ ಉಲ್ಲೇಖಿಸಿದ್ದರು. ಆ ನಿಟ್ಟಿನಲ್ಲಿ ತನ್ನ ಹೆಸರನ್ನು ರಹಸ್ಯವಾಗಿಡುವಂತೆಯೂ ದುಬೆ ಪತ್ರದಲ್ಲಿ ವಿನಂತಿ ಮಾಡಿಕೊಂಡಿದ್ದರು.
ಅಂತೂ 2002 ನವೆಂಬರ್ 11ರಂದು ಪ್ರಧಾನಮಂತ್ರಿ ಕಚೇರಿಗೆ ಪತ್ರ ತಲುಪಿತ್ತು. ತದನಂತರ ಪ್ರಧಾನಿ ಕಚೇರಿಗೆ ಪತ್ರ ಬರೆದು ತಮ್ಮ ಮಾನ ಹರಾಜು ಹಾಕಲು ಯತ್ನಿಸಿದ್ದ ವಿವರ ಶೀಘ್ರವೇ ಬಹಿರಂಗಗೊಂಡಿತ್ತು. ಅದರ ಪರಿಣಾಮ 2003 ನವೆಂಬರ್ 27ರಂದು ಬಿಹಾರದ ಗಯಾ ಸರ್ಕ್ಯೂಟ್ ಹೌಸ್ ಮುಂಭಾಗದಲ್ಲೇ ದುಬೆಯನ್ನು ಗುಂಡು ಹೊಡೆದು ಸಾಯಿಸಿದ್ದರು.