ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದಕರು ಹಿಂದು ಅಥವಾ ಮುಸ್ಲಿಮರಲ್ಲ: ಗಡ್ಕರಿ (Terrorist | Hindu | Muslim | Nitin Gadkari | Hinduism | BJP | Religion)
Bookmark and Share Feedback Print
 
PTI
ಭಯೋತ್ಪಾದಕನಿಗೆ ಧರ್ಮ ಇಲ್ಲ, ಅವರನ್ನು ಹಿಂದೂ ಅಥವಾ ಮುಸ್ಲಿಂ ಭಯೋತ್ಪಾದಕ ಎಂದು ವರ್ಗೀಕರಿಸಬಾರದು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವವರನ್ನು ಧರ್ಮದ ಆಧಾರದಲ್ಲಿ ಗುರುತಿಸುತ್ತಿರುವುದು ದುರದೃಷ್ಟಕರ ಎಂದಿರುವ ಅವರು, ಭಯೋತ್ಪಾದಕನಿಗೆ ಜಾತಿ, ಧರ್ಮ ಅಥವಾ ಯಾವುದೇ ಪಂಥಗಳಿಲ್ಲ ಎಂದು ಅಭಿಪ್ರಾಯಪಟ್ಟರು.

ದೇವರಿಗೆ ಭಯಪಡುವ ಯಾವುದೇ ಹಿಂದು ಕೂಡ ಯಾವುದೇ ಮುಗ್ಧ ಮುಸಲ್ಮಾನನನ್ನು ಕೊಲ್ಲಲಾರ ಮತ್ತು ಅದೇ ರೀತಿಯಾಗಿ ದೇವರ ಬಗ್ಗೆ ನಂಬಿಕೆಯಿರುವ ಮುಸಲ್ಮಾನರು ಯಾವುದೇ ಹಿಂದುಗಳನ್ನು ಕೊಲ್ಲಲಾರರು. ಅವರು ಕೊಲ್ಲುತ್ತಾರೆ ಎಂದಾದರೆ ಅವನೊಬ್ಬ ಯಾವುದೇ ಧರ್ಮಕ್ಕೆ ಸೇರದ ಉಗ್ರಗಾಮಿ ಅಷ್ಟೇ ಎಂದು ಗಡ್ಕರಿ ನುಡಿದರು.

ಹಿಂದುತ್ವವು ಯಾವುದೇ ರಾಜಕೀಯ ಪಕ್ಷದ ಅಜೆಂಡಾ ಆಗಿರಲು ಸಾಧ್ಯವಿಲ್ಲ ಎಂದಿರುವ ಅವರು, ಅದೊಂದು ಜೀವನ ಪದ್ಧತಿ ಎಂದು ನುಡಿದರಲ್ಲದೆ, ಹಿಂದುತ್ವದ ಬಗಗೆ 1995ರ ಸುಪ್ರೀಂ ಕೋರ್ಟ್ ತೀರ್ಪೇ ಮಾದರಿಯಾಗಿದೆ ಎಂದಿದ್ದಾರೆ.

ಹಿಂದು, ಹಿಂದುತ್ವ ಮತ್ತು ಹಿಂದೂವಾದಕ್ಕೆ ಯಾವುದೇ ನಿಖರವಾದ ಅರ್ಥವನ್ನು ಹೊರಿಸಲಾಗದು ಮಚ್ಚು ಅದರ ಸಾರದಲ್ಲಿರುವ ಅರ್ಥವನ್ನು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಹೊರತುಪಡಿಸಿ, ಧರ್ಮದ ಮಿತಿಗಳಿಗೆ ಮಾತ್ರವೇ ಸೀಮಿತಗೊಳಿಸುವಂತಿಲ್ಲ. ಹಿಂದುತ್ವವನ್ನು ಜೀವನ ಪದ್ಧತಿಯನ್ನಾಗಿ ಅಥವಾ ಮನಸ್ಥಿತಿಯಾಗಿ ಅರ್ಥೈಸಿಕೊಳ್ಳಬಹುದು ಮತ್ತು ಧಾರ್ಮಿಕ ಹಿಂದು ಮೂಲಭೂತವಾದಕ್ಕೆ ಹೋಲಿಸಲಾಗದು ಅಥವಾ ಆ ರೀತಿ ಅರ್ಥೈಸಿಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ