ಕೇರಳದ ಕೊಟ್ಟಾಯಂ ಜಲ್ಲೆಯಲ್ಲಿ ಬಸ್ವೊಂದು ನದಿಗೆ ಉರುಳಿದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ 4ಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದಾಗಿ ಆರಂಭಿಕ ವರದಿಗಳು ತಿಳಿಸಿವೆ.
ಚೇರ್ತಲದಿಂದ ಕೊಟ್ಟಾಯಂಗೆ ಹೋಗುತ್ತಿದ್ದ ಪಿ.ಡಿ.ಎಸ್ ಎಂಬ ಖಾಸಗಿ ಬಸ್ ಅಪಘಾತಕ್ಕೀಡಾಗಿದ್ದು, ಬಸ್ ನದಿಯಲ್ಲಿ ಪೂರ್ಣವಾಗಿ ಮುಳುಗಿ ಹೋಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿರುವುದಾಗಿ ವರದಿಯಾಗಿದೆ.
ಶೀಪ್ರ ಗತಿಯ ರಕ್ಷಣೆ ಕಾರ್ಯಾಚರಣೆ ಜಾರಿಯಲ್ಲಿದ್ದು, ಕ್ರೇನ್ ಮುಖಾಂತರ ಬಸ್ ಮೇಲೆತ್ತುವ ಪ್ರಯತ್ನ ಮುಂದುವರಿದಿದೆ. ಘಟನೆಯಲ್ಲಿ 17 ಮಂದಿಯನ್ನು ರಕ್ಷಿಸಲಾಗಿದ್ದು 4ಮಂದಿ ಮೃತಪಟ್ಟಿರುವುದಾಗಿ ಧೃಢಿಕರೀಸಲಾಗಿದೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನದಿಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ನಲ್ಲಿ ಮಿತಿಮೀರಿದ ಪ್ರಯಾಣಿಕರು ಸಂಚರಿಸುತ್ತಿದ್ದರು ಎಂದು ಕೂಡಾ ಹೇಳಲಾಗಿದೆ.