ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮಿತಾಭ್ ಆಹ್ವಾನಿಸಿದ್ದು ಯಾರು?ನಾವಲ್ಲ ಎಂದ ಕಾಂಗ್ರೆಸ್! (Amitabh Bachchan | Bandra -Worli sealink | Ashok Chavan | Congress)
Bookmark and Share Feedback Print
 
ನಗರದ ಎರಡನೇ ಹಂತದ ಬಹುಕೋಟಿ ವೆಚ್ಚದ ವರ್ಲಿ-ಬಾಂದ್ರಾ ಸೀ ಲಿಂಕ್ (ಸಮುದ್ರ ಮಾರ್ಗದ ಸೇತುವೆ) ಉದ್ಘಾಟನೆ ಕಾರ್ಯಕ್ರಮಕ್ಕೆ ಗುಜರಾತ್ ಅಂಬಾಸಡರ್ ಆಗಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಆಹ್ವಾನಿಸಿರುವುದು ಯಾರು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಅಸಪ್ವರ ಎದ್ದಿದ್ದು, ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಬುಧವಾರ ಬಹುಕೋಟಿ ವೆಚ್ಚದ ನಾಲ್ಕು ಪಥದ ಸೀ ಲಿಂಕ್ ಉದ್ಘಾಟನೆ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಬಿಗ್ ಬಿ ಅವರನ್ನು ಆಹ್ವಾನಿಸಿದ್ದರು. ಆದರೆ ಗುಜರಾತ್ ಅಂಬಾಸಡರ್ ಆಗಿರುವ ಅಮಿತಾಭ್ ಬಚ್ಚನ್ ಕಾರ್ಯಕ್ರಮಕ್ಕೆ ಆಗಮಿಸಿರುವುದು ಕಾಂಗ್ರೆಸ್‌ನ ಕೆಲ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಚವಾಣ್ ಅವರಲ್ಲಿ ವಿವರಣೆಯನ್ನು ಕೂಡ ಕೇಳುವ ಮೂಲಕ ಚವಾಣ್ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಕಾಂಗ್ರೆಸ್ -ಎನ್‌ಸಿಪಿ ಮೈತ್ರಿಕೂಟದ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವಾಲಯ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಕಾರ್ಯಕ್ರಮಕ್ಕೆ ಬಿಗ್ ಬಿಯನ್ನು ಅಹ್ವಾನಿಸಿರುವುದು ಸರಿಯಲ್ಲ ಎಂಬುದು ಕೆಲವು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ. ಒಂದು ಕಾಲದಲ್ಲಿ ಗಾಂಧಿ ಕುಟುಂಬದ ನಿಕಟವರ್ತಿಯಾಗಿದ್ದ ಬಚ್ಚನ್ ತದನಂತರದಲ್ಲಿ ಕಾಂಗ್ರೆಸ್‌ನೊಂದಿಗೆ ಮುನಿಸಿಕೊಂಡು ದೂರವಾಗಿದ್ದರು. ಆ ಹಿನ್ನೆಲೆಯಲ್ಲಿಯೂ ಕೂಡ ಬಚ್ಚನ್ ಅವರ ಆಹ್ವಾನ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಕಿಡಿಯನ್ನು ಹೊತ್ತಿಸಿದೆ.

ಎರಡನೇ ಹಂತದ ರಾಜೀವ್ ಗಾಂಧಿ ಸೀ ಲಿಂಕ್(ಆರ್‌ಜಿಎಸ್‌ಎಲ್)‌ನ ಉದ್ಛಾಟನೆಗೆ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಅಮಿತಾಬ್ ಬಚ್ಚನ್ ಅವರನ್ನು ಆಹ್ವಾನಿಸಿರುವುದು ಸರಿಯಲ್ಲ ಎಂದು ಮುಂಬೈ ಪ್ರದೇಶ ಕಾಂಗ್ರೆಸ್ ಸಮಿತಿಯ ವರಿಷ್ಠ ಕೃಪಾಶಂಕರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಮಾರಂಭದಲ್ಲಿ ಬಿಗ್ ಬಿಯನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಿಲ್ಲ ಎಂದು ದೂರಿದ್ದಾರೆ.

ಆದರೆ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರನ್ನು ಸೀ ಲಿಂಕ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮುಂಬೈ ಎಲ್ಲಾ ಜನರಿಗಾಗಿಯೇ ಇರುವುದು, ಹಾಗಾಗಿ ಮುಂಬೈಯನ್ನು ಜಾಗತಿಕಮಟ್ಟದ ನಗರವನ್ನಾಗಿ ಮಾಡುವ ಅಗತ್ಯವಿದೆ ಎಂದು ಒತ್ತಿಹೇಳಿದ ಚವಾಣ್, ಮಹಾರಾಷ್ಟ್ರವನ್ನು ಜಾಗತಿಕ ರಾಜ್ಯವನ್ನಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇದು ಮಾಧ್ಯಮಗಳ ಕಿತಾಪತಿ-ಬಚ್ಚನ್ ಪ್ರತಿಕ್ರಿಯೆ: ಎರಡನೇ ಹಂತದ ಸೀ ಲಿಂಕ್ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿರುವುದಕ್ಕೆ ಬಿಗ್ ಬಿ ಗುರುವಾರ ಬೆಳಿಗ್ಗೆ ತಮ್ಮ ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ತೆರಳಿದ್ದೇನೆ. ಆದರೆ ಇದರ ಬಗ್ಗೆಯೂ ಮತ್ತೆ, ಮತ್ತೆ ತನ್ನ ವಿರುದ್ಧ ವಿವಾದವನ್ನು ಹುಟ್ಟು ಹಾಕಲಾಗುತ್ತಿದೆ ಎಂದು ಬಚ್ಚನ್ ಆರೋಪಿಸಿದ್ದಾರೆ. ಇವೆಲ್ಲ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕಿತಾಪತಿ ಎಂದು ಹರಿಹಾಯ್ದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ