ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾವು ಶಿಳ್ಳೆ ಹಾಕ್ತೀವಿ: ಮುಲಾಯಂಗೆ ರೇಣುಕಾ ತಿರುಗೇಟು
(Renuka Chowdhury | Womens Reservation | Mulayam Singh | Eve Teasing | Controversy)
ಮಹಿಳಾ ಮೀಸಲಾತಿಯಿಂದ ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ, ಅಲ್ಲಿ ಪುಂಡು ಪೋಕರಿಗಳು ಸೀಟಿ ಬಜಾಯಿಸಿ ಚುಡಾಯಿಸುತ್ತಾರೆ ಎಂಬ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ, ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧುರಿ, ಸೀಟಿ ಬಜಾಯಿಸಿದರೆ ನಾವು ಕೂಡ ತಿರುಗಿ ಶಿಳ್ಳೆ ಹಾಕಬಲ್ಲೆವು ಎಂದು ಪ್ರತಿ-ಹೇಳಿಕೆ ನೀಡಿದ್ದಾರೆ.
ಮುಲಾಯಂ ಹೇಳಿಕೆ ಕುರಿತು ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ರೇಣುಕಾ, ಹೇಳಿದ್ದನ್ನು ಮಾಡಿ ತೋರಿಸುವಂತೆ ಮುಲಾಯಂಗೆ ಸವಾಲೊಡ್ಡಿದ್ದಾರೆ.
'ಮುಲಾಯಂ ಸಿಂಗ್ ಅವರು ತಮ್ಮ ಸೊಸೆಯನ್ನೇ ಕಣಕ್ಕಿಳಿಸಿದ್ದಾರೆ ಎಂಬುದನ್ನು ಮರೆತಿದ್ದಾರೆ. ಆಕೆಯತ್ತ ಶಿಳ್ಳೆ ಹಾಕುವುದು ಸರಿ. ಆದರೆ ನಮ್ಮತ್ತ ಯಾರು ಶಿಳ್ಳೆ ಹಾಕುವ ಧೈರ್ಯ ಯಾರಿಗಿದೆ ಎಂಬುದನ್ನು ನಾವು ತಿಳಿಯಬಯಸಿದ್ದೇವೆ. ಹಾಗಿದ್ದಲ್ಲಿ, ತಿರುಗಿ ಶಿಳ್ಳೆ ಹಾಕುವುದರಿಂದ ಯಾರೂ ನಮ್ಮನ್ನು ತಡೆಯಲಾರರು' ಎಂದೂ ಅವರು ಹೇಳಿದ್ದಾರೆ.