ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11: 'ಕಸಬ್ ಪಾಕಿಸ್ತಾನಿಯಾದ್ದರಿಂದ ಬಲಿಪಶು ಮಾಡಲಾಗಿದೆ' (Pakistan | Mumbai terror | Kasab | Faheem Ansari | Sabauddin Ahmed | trial)
Bookmark and Share Feedback Print
 
ND
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹಳ್ಳಿ ಹುಡುಗನಾದ ಅಮಿರ್ ಅಜ್ಮಲ್ ಕಸಬ್‌ನನ್ನು ಪಾಕಿಸ್ತಾನಿ ಎಂಬ ಕಾರಣಕ್ಕಾಗಿಯೇ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಕಸಬ್ ವಕೀಲ ಕೆ.ಪಿ.ಪವಾರ್ ಗುರುವಾರ ಅಂತಿಮ ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಿದ್ದಾರೆ.

'26/11ರ ದಾಳಿಯ ಸಂಚಿಗೂ ಕಸಬ್‌ಗೂ ಯಾವುದೇ ಸಂಬಂಧವಿಲ್ಲ. ಆತ ಪಾಕಿಸ್ತಾನಿ ಎಂಬ ಕಾರಣಕ್ಕಾಗಿಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಲ್ಲದೇ ಪೊಲೀಸರ ಸಂಚಿನಿಂದಲೇ ಆತನನ್ನು ಆರೋಪಿ ಎಂದು ಸಾಬೀತುಪಡಿಸಲು ಮುಂದಾಗಿದೆ ಎಂದು ಪವಾರ್ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಸಬ್ ನವೆಂಬರ್ 26ರ ಮೊದಲೇ ಭಾರತಕ್ಕೆ ಬಂದಿದ್ದ. ಆ ಸಂದರ್ಭದಲ್ಲಿಯೇ ಆತ ಜುಹೂ ಚೌಪಟ್ಟಿಯ ಪ್ರದೇಶದಲ್ಲಿ ವಿಹಾರಕ್ಕಾಗಿ ಬಂದಿದ್ದ ಸಮಯದಲ್ಲಿ ಪೊಲೀಸರು ಸೆರೆಹಿಡಿದಿರುವುದಾಗಿ ವಿವರಿಸಿದ್ದಾರೆ. ಕಸಬ್ ಒಬ್ಬ ಪಾಕಿಸ್ತಾನದ ಸಣ್ಣ ಹಳ್ಳಿಯ ಮುಗ್ದ ಹುಡುಗನಾಗಿದ್ದಾನೆ. ಆ ನಿಟ್ಟಿನಲ್ಲಿಯೇ ಪೊಲೀಸರು ಕಸಬ್‌ನನ್ನು ತುಂಬಾ ಸುಲಭವಾಗಿ ತಮ್ಮ ದಾಳವನ್ನಾಗಿ ಮಾಡಿಕೊಂಡಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.

ಮುಂಬೈ ದಾಳಿ ನಡೆಸಲು ಬಂದಿದ್ದ ಎಲ್ಲಾ ಹತ್ತು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಮಾತ್ರ ತಾವು ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಉಗ್ರನೊಬ್ಬನನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ಕಥೆ ಹೆಣೆದಿರುವುದಾಗಿ ಹೇಳಿದರು. ಆದರೆ ವಿಪರ್ಯಾಸವೆಂದರೆ ಸಂಚಿನ ರೂವಾರಿಗಳಾಗಿದ್ದು, ತಲೆಮರೆಸಿಕೊಂಡಿರುವ 35ಮಂದಿ ಆರೋಪಿಗಳಲ್ಲಿ ಒಬ್ಬರನ್ನೂ ಈವರೆಗೂ ಬಂಧಿಸಿಲ್ಲ. ಆದರೂ ಅಮಾಯಕ ಯುವಕನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಫೋಟೋಗ್ರಾಫ್ಸ್, ಸಿಸಿಟಿವಿ ದೃಶ್ಯ ಹಾಗೂ ಡಿಎನ್‌ಎ ಪರೀಕ್ಷೆ ಇವುಗಳಲ್ಲಿ ಕೈಚಳಕ ತೋರಿಸಲಾಗಿದೆ. ಹಾಗೂ ಇದನ್ನು ಸೃಷ್ಟಿಸಿದ್ದು, ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲದ್ದು ಎಂದು ಪವಾರ್ ನ್ಯಾಯಾಲಯಕ್ಕೆ ಕಸಬ್ ಪರ ವಾದ ಮಂಡಿಸುತ್ತಾ ತಿಳಿಸಿದ್ದಾರೆ.

ಪೊಲೀಸರ ಬಲವಂತದಿಂದಾಗಿ ಕಸಬ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾನೆಂದು ಸಮರ್ಥನೆ ನೀಡಿದ ಪವಾರ್, ತಪ್ಪನ್ನು ಒಪ್ಪಿಕೊಂಡರೆ ಕಡಿಮೆ ಶಿಕ್ಷೆಯಾಗುವುದೆಂಬ ಭರವಸೆಯನ್ನೂ ಕೂಡ ನೀಡಿದ್ದಾರೆಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ