ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮ್ಮದೇ ಪಕ್ಷಕ್ಕೆ ಉಮಾ ರಾಜೀನಾಮೆ: ಮರಳಿ ಬಿಜೆಪಿಗೆ? (Madhya Pradesh | Uma Bharti | BJP | Bharatiya Janashakti Party)
Bookmark and Share Feedback Print
 
PTI
ತಾವೇ ಸ್ಥಾಪಿಸಿದ ತಮ್ಮ ನೇತೃತ್ವದ ಪಕ್ಷಕ್ಕೇ ರಾಜೀನಾಮೆ ನೀಡಿರುವ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಮರಳಿ ಮಾತೃಪಕ್ಷವಾದ ಬಿಜೆಪಿಗೆ ಸೇರುವ ಸುಳಿವು ನೀಡಿದ್ದಾರೆ.

2005ರಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ತಾವು ಸ್ಥಾಪಿಸಿದ್ದ ಭಾರತೀಯ ಜನಶಕ್ತಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ ಉಮಾ ಭಾರತಿ, ಆದರೆ ಆಕೆ ಬಿಜೆಪಿ ಹೊಸ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಬಿಜೆಪಿಗೆ ಮರಳುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮೂಲಗಳು ಹೇಳಿವೆ.

2009ರ ಲೋಕಸಭಾ ಚುನಾವಣೆಗಳಿಗೆ ಮೊದಲು ಉಮಾ, ಬಿಜೆಪಿ ನಾಯಕರನ್ನು ಭೇಟಿಯಾಗಿ ಪಕ್ಷಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದರಾದರೂ, ಫಲಿತಾಂಶದ ವರೆಗೆ ಕಾಯಲು ಆಕೆಗೆ ಸೂಚಿಸಲಾಗಿತ್ತು. ಬಿಜೆಪಿ ವೇದಿಕೆಯಲ್ಲಿ ಆಕೆ ಪ್ರತಾರ ನಡೆಸಿದ್ದರಾದರೂ, ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೆ ಬಿಜೆಪಿಗೆ ಹೀನಾಯ ಸೋಲು ತಟ್ಟಿದ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಆಂತರಿಕ ಕಚ್ಚಾಟಗಳಿಂದಾಗಿ ಉಮಾ ಮರುಸೇರ್ಪಡೆ ವಿಷಯವನ್ನು ಪ್ರಸ್ತಾಪಿಸಲು ಬಿಜೆಪಿ ಮುಖಂಡರಿಗೆ ಸಮಯವೇ ಇರಲಿಲ್ಲ.

ಅತ್ತ, ಹಿಂದುಳಿದ ನಾಯಕಿಯನ್ನು ಪಕ್ಷಕ್ಕೆ ಮರುಸೇರಿಸಿಕೊಳ್ಳುವ ಬಗ್ಗೆ ಬಿಜೆಪಿ ಕೇಂದ್ರೀಯ ಮುಖಂಡರಿಗೆ ಒಲವು ಇದ್ದರೂ, ಮಧ್ಯಪ್ರದೇಶದಲ್ಲಿ ಬಾಬುಲಾಲ್ ಗೌರ್ ಅಲ್ಪಾವಧಿ ಆಡಳಿತದ ಬಳಿಕ, ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್, ತಾವೇ ಚುನಾವಣೆ ಗೆದ್ದುಕೊಡಬಲ್ಲೆವು ಎಂದು ತೋರಿಸಿಕೊಟ್ಟಿದ್ದಾರೆ. ಹೀಗಾಗಿ, ಉಮಾ ಭಾರತಿಯಿಂದ ಪಕ್ಷಕ್ಕೆ ಭಾರೀ ಪ್ರಯೋಜನವಾಗುತ್ತದೆ ಎಂದೂ ಹೇಳಲಾಗುವುದಿಲ್ಲ ಎನ್ನುತ್ತಾರೆ ಬಿಜೆಪಿ ಆಂತರಿಕ ಮೂಲಗಳು. ಇದಲ್ಲದೆ, ಈಗಾಗಲೇ ಆಕೆಯೇ ಸ್ಥಾಪಿಸಿದ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧವೇ ಆಗೀಗ್ಗೆ ಕೂಗು ಎದ್ದಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ತಮ್ಮ ಪಕ್ಷದ ಕಾರ್ಯಾಧ್ಯಕ್ಷರಾದ ಸಂಘಪ್ರಿಯ ಗೌತಮ್ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಾಗೂ ತನ್ನದೇ ಆರೋಗ್ಯದ ದೃಷ್ಟಿಯಿಂದ, ಪಕ್ಷದ ಎಲ್ಲ ಹೊಣೆಗಾರಿಕೆಗಳನ್ನು ಕಳಚಿಕೊಳ್ಳುತ್ತಿರುವುದಾಗಿ ಉಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ