ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಸೇನ್ ವಿರುದ್ಧದ ಕೇಸ್ ವಜಾಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ (K G Balakrishnan | Supreme Court | M F Husain | India | Hindu Goddesses)
Bookmark and Share Feedback Print
 
ಖ್ಯಾತ ಚಿತ್ರ ಕಲಾವಿದ ಎಂ.ಎಫ್.ಹುಸೇನ್ ಅವರು ಭಾರತಕ್ಕೆ ಮರಳುವಂತೆ ಅನುಕೂಲ ಮಾಡಿಕೊಡುವಂತೆ ಹಾಗೂ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್)ಯನ್ನು ಶುಕ್ರವಾರ ವಜಾಗೊಳಿಸಿದೆ.

ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ತನ್ನ ಕುಂಚದಲ್ಲಿ ಬಿಡಿಸಿ ಸಾಕಷ್ಟು ವಿವಾದಕ್ಕೆ ಈಡಾಗಿದ್ದ ಎಂ.ಎಫ್.ಹುಸೇನ್ ವಿರುದ್ಧ ದೇಶದ ವಿವಿಧೆಡೆ ಸುಮಾರು 95ಕ್ರಿಮಿನಲ್ ದೂರುಗಳು ದಾಖಲಾಗಿದ್ದವು.

ಆ ನಿಟ್ಟಿನಲ್ಲಿ ಹುಸೇನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಕ್ರಿಮಿನಲ್ ದೂರುಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ಹುಸೇನ್ ವಿರುದ್ಧದ ಮೊಕದ್ದಮೆ ವಜಾಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಹುಸೇನ್ ಈಗ ದೋಹಾದಲ್ಲಿದ್ದಾರೆ, ಇದೀಗ ಸಮಸ್ಯೆ ಏನು ಎಂದು ಅರ್ಜಿದಾರರನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಮೊಕದ್ದಮೆ ವಾಪಸು ತೆಗೆಯುವಂತೆ ನೀವು ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿ. ಆ ರೀತಿ ಮೊಕದ್ದಮೆ ವಾಪಸು ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಲಾವಿದ ಹುಸೇನ್ ವಿರುದ್ಧ ದಾಖಲಾಗಿರುವ ಮೊಕದ್ದಮೆ ವಾಪಸ್ ಪಡೆಯುವಂತೆ ಜಮ್ಮು-ಕಾಶ್ಮೀರ ಪ್ಯಾಂಥರ್ಸ್ ಪಕ್ಷದ ವರಿಷ್ಠ ಭೀಮ್ ಸಿಂಗ್ ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಸಿ, ಹುಸೇನ್ ಅವರನ್ನು ಭಾರತಕ್ಕೆ ವಾಪಸು ಬರುವಂತೆ ಅಪೆಕ್ಸ್ ಕೋರ್ಟ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೂಚನೆ ನೀಡಬೇಕೆಂಬುದಾಗಿಯೂ ಕೋರಿದ್ದರು.

ಅಲ್ಲದೇ, ಹುಸೇನ್ ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಅವರ ಜೀವಕ್ಕೆ ಅಪಾಯವಿರುವುದರಿಂದ ಭಾರತಕ್ಕೆ ಬರಲು ಅವರಿಗೆ ಅಸಾಧ್ಯ ಎಂಬುದಾಗಿಯೂ ಅರ್ಜಿಯಲ್ಲಿ ವಿವರಿಸಿದ್ದರು.

ಆದರೆ ಹುಸೇನ್ ವಿರುದ್ಧ ದಾಖಲಾಗಿರುವುದು ವೈಯಕ್ತಿಕ ನೆಲೆಯ ಮೊಕದ್ದಮೆಗಳಾಗಿವೆ. ಹಾಗಾಗಿ ಆ ದೂರುಗಳನ್ನು ವಾಪಸ್ ಪಡೆಯುವಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಅಪೆಕ್ಸ್ ಕೋರ್ಟ್ ತಿಳಿಸಿದೆ.

ಹಿಂದೂ ದೇವತೆಗಳನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಿಸಿದ ನಂತರ ಹುಸೇನ್ ವಿರುದ್ಧ ಪ್ರತಿಭಟನೆ, ಜೀವ ಬೆದರಿಕೆ ಹೆಚ್ಚಾದ ಹಿನ್ನೆಲೆಯಲ್ಲಿ 2006ರಲ್ಲಿಯೇ ಸ್ವಯಂ ಆಗಿ ವಿದೇಶದಲ್ಲಿ ನೆಲೆಸಿದ್ದರು. ಇದೀಗ ಇತ್ತೀಚೆಗಷ್ಟೇ ಕತಾರ್ ದೇಶ ಹುಸೇನ್ ಅವರಿಗೆ ಪ್ರಜೆಯ ಹಕ್ಕನ್ನು ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ