ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರವಾದಿ ಅವಹೇಳನ: ಪ್ರಶ್ನೆಪತ್ರಿಕೆ ಸೃಷ್ಟಿಸಿದ ಉದ್ವಿಗ್ನತೆ (College Question Paper Create Tension in Kerala | Prophet Mohammad | Muslim)
Bookmark and Share Feedback Print
 
PR
ಪ್ರಶ್ನೆ ಪತ್ರಿಕೆಯೊಂದರಲ್ಲಿ ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿಯಾಗಿ ಉಲ್ಲೇಖಿಸಲಾಗಿದೆ ಎಂಬ ಘಟನೆಯೊಂದು ಕೋಮು ಉದ್ವಿಗ್ನತೆಗೆ ಕಾರಣವಾಗಿದ್ದು, ಪುಟ್ಟ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ. ಇದೇ ವೇಳೆ ಪ್ರಶ್ನೆ ಪತ್ರಿಕೆ ತಯಾರಿಸಿದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಖಾಸಗಿ ಕಾಲೇಜಾಗಿರುವ ನ್ಯೂಮನ್ ಕಾಲೇಜಿನ ಇಂಟರ್ನಲ್ಸ್ ಪರೀಕ್ಷೆಗೆ ತಯಾರಿಸಲಾದ ಪ್ರಶ್ನೆ ಪತ್ರಿಕೆಯಲ್ಲಿ, ವ್ಯಾಕರಣ ಚಿಹ್ನೆ ಬಳಸುವುದಕ್ಕಾಗಿ ಪ್ರವಾದಿ ಮಹಮದ್ ಮತ್ತು ದೇವರ ನಡುವಿನ ಸಂಭಾಷಣೆಯ ತುಣುಕು ಸೇರಿಸಲಾಗಿತ್ತು. ವಾಸ್ತವವಾಗಿ ಅದು ನಾಟಕಕಾರ ಪಿ.ಟಿ.ಕುಂಞಿಮೊಹಮ್ಮದ್ ಅವರ ಕೃತಿಯೊಂದರಲ್ಲಿರುವ ಸಂಭಾಷಣೆಯ ತುಣುಕು. ಅದರಲ್ಲಿ ಪ್ರವಾದಿಯವರು ದೇವರೇ ಎಂದು ಕರೆದಾಗ, ದೇವರು ಪುನರಪಿ ಸಂಬೋಧಿಸಿದ ಸಾಲು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಷಯ ತಿಳಿದ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸದಸ್ಯರು ಇವರ ಪ್ರತಿಭಟನೆಗೆ ಸಾಥ್ ನೀಡಿದರು. ಅಂಗಡಿ ಮುಂಗಟ್ಟು ಮುಚ್ಚಿಸುವಂತೆ ಈ ಗುಂಪು ಬಲವಂತ ಮಾಡಿದಾಗ, ಸಂಘರ್ಷವೇರ್ಪಟ್ಟಿತು. ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸ್ಥಳ ಪ್ರಕ್ಷುಬ್ಧವಾಗಿದೆ.

ಇದೀಗ ದ್ವಿತೀಯ ಬಿ.ಕಾಂ. ಪರೀಕ್ಷೆಯ ಇಂಟರ್ನಲ್ಸ್‌ಗೆ ಈ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿರುವ ಪ್ರೊಫೆಸರ್ ಟಿ.ಜೆ. ಜೋಸೆಫ್ ಎಂಬವರು ಕ್ಷಮೆ ಯಾಚಿಸಿದ್ದು, ಅವರನ್ನು ಕಾಲೇಜು ಅಮಾನತುಗೊಳಿಸಿದೆ.

ಇದೇ ವೇಳೆ, ಪ್ರಶ್ನೆ ಪತ್ರಿಕೆ ತಯಾರಿಸಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ರಾಜ್ಯ ಶಿಕ್ಷಣ ಸಚಿವ ಎಂ.ಎ.ಬೇಬಿ ಅವರು ಇಡುಕ್ಕಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ತೊಡುಪ್ಪುರವು ಕೊಚ್ಚಿಯಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ