ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಗೂ ನ್ಯಾಯ ಸಿಕ್ಕಿತು:ದುಬೆ ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ (CBI | Satyendra Dubey | Patna | life term | Bihar | corrupt officials)
ಕೊನೆಗೂ ನ್ಯಾಯ ಸಿಕ್ಕಿತು:ದುಬೆ ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ
ಪಾಟ್ನಾ, ಶನಿವಾರ, 27 ಮಾರ್ಚ್ 2010( 17:26 IST )
ಸತ್ಯೇಂದ್ರ ಕುಮಾರ್ ದುಬೆ ಹತ್ಯಾ ಪ್ರಕರಣದ ಮೂವರು ಆರೋಪಿಗಳಿಗೆ ವಿಶೇಷ ಸಿಬಿಐ ಕೋರ್ಟ್ ಶನಿವಾರ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಪ್ರಕರಣಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ದೇಶಾದ್ಯಂತ ತೀವ್ರ ವಿವಾದಕ್ಕೆಡೆಯಾದ ನಿಷ್ಠಾವಂತ ಇಂಜಿನಿಯರ್ ಸತ್ಯೇಂದ್ರ ದುಬೆ ಹತ್ಯೆ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ದೋಷಿ ಎಂದು ಪಾಟ್ನಾ ಹೈಕೋರ್ಟ್ ಸೋಮವಾರ ತೀರ್ಪು ನೀಡಿ, ಮಾರ್ಚ್ 27ರಂದು ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿತ್ತು.
ದುಬೆ ಹತ್ಯೆ ಪ್ರಕರಣದಲ್ಲಿ ಮಂತು ಕುಮಾರ್, ಉದಯ್ ಕುಮಾರ್ ಹಾಗೂ ಪಿಂಕು ರವಿದಾಸ್ ಸೇರಿದಂತೆ ಮೂರು ಮಂದಿ ದೋಷಿತರು ಎಂದು ಪಾಟ್ನಾ ಹೈಕೋರ್ಟ್ ಪೀಠ ಹೇಳಿತ್ತು.
ಮಂತು ಕುಮಾರ್‌ನನ್ನು ಭಾರತೀಯ ದಂಡ ಸಂಹಿತೆ 302, 394, 27(ಎ) ಕಾನೂನಡಿಯಲ್ಲಿ ದೋಷಿ ಎಂದು ಘೋಷಿಸಿದ್ದರೆ, ಇನ್ನಿಬ್ಬರನ್ನು ಐಪಿಸಿ 302/34, 394ಅಡಿಯಲ್ಲಿ ದೋಷಿತರು ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.
ಕಾನ್ಪುರದ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ದುಬೆ ನ್ಯಾಷನಲ್ ಹೈವೇಸ್ ಅಥೋರಿಟಿ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸಿದ್ದರು. 31ರ ಹರೆಯದ ದುಬೆ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಜಾರ್ಖಂಡ್‌ನಲ್ಲಿ ಗೋಲ್ಡನ್ ಕ್ವಾಡ್ರಿಲಾಟೆರಾಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆಯುತ್ತಿರುವುದಾಗಿ ದೂರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ನಂತರ ಅದಕ್ಕೆ ಪ್ರತೀಕಾರ ಎಂಬಂತೆ ಬಿಹಾರದ ಗಯಾ ಜಿಲ್ಲೆಯ ಸರ್ಕ್ಯೂಟ್ ಹೌಸ್‌ನ ಮುಂಭಾಗದಲ್ಲಿ ದುಬೆ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.
ಭ್ರಷ್ಟಾಚಾರವನ್ನು ವಿರೋಧಿಸಿದ ಪ್ರಾಮಾಣಿಕ ಇಂಜಿನಿಯರ್ ದುಬೆ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಹಂತಕರನ್ನು ಕೂಡಲೇ ಪತ್ತೆ ಹಚ್ಚಬೇಕೆಂಬ ಕೂಗು ಬಲವಾದ ನಂತರ ದುಬೆ ಹಂತಕರು ಸಿಬಿಐ ಬಲೆಗೆ ಬಿದ್ದಿದ್ದರು.