ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಗಲಭೆಯನ್ನು ಖಂಡಿಸುತ್ತೀರಾ?: ಬಚ್ಚನ್‌ಗೆ ಕಾಂಗ್ರೆಸ್
(Gujarat riots | Amitabh Bachchan | Congress | Narendra Modi)
ಗುಜರಾತ್ ಗಲಭೆಯನ್ನು ಖಂಡಿಸುತ್ತೀರಾ?: ಬಚ್ಚನ್‌ಗೆ ಕಾಂಗ್ರೆಸ್
ನವದೆಹಲಿ, ಸೋಮವಾರ, 29 ಮಾರ್ಚ್ 2010( 19:03 IST )
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರತ್ತ ನೇರವಾಗಿ ಮುಖ ಮಾಡಿರುವ ಕಾಂಗ್ರೆಸ್, 2002ರ ಗುಜರಾತ್ ನರಮೇಧದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರವನ್ನು ಸಮರ್ಥಿಸುತ್ತೀರಾ ಅಥವಾ ಖಂಡಿಸುತ್ತೀರಾ ಎಂದು ಸೋಮವಾರ ಪ್ರಶ್ನಿಸಿದೆ.
2002ರಲ್ಲಿ ನಡೆದ ಗುಜರಾತ್‌ನಲ್ಲಿನ ಅಮಾಯಕರ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿಯವರ ಪಾತ್ರವನ್ನು ಅವರು (ಅಮಿತಾಬ್) ಖಂಡಿಸುತ್ತಾರೋ ಇಲ್ಲ ಸಮರ್ಥಿಸಿಕೊಳ್ಳುತ್ತಾರೋ? ಮೋದಿ ಅಧಿಕಾರಕ್ಕೆ ಬಂದ ನಂತರ ನಡೆದ ಗುಜರಾತ್ ನರಮೇಧ ಮತ್ತು ನಕಲಿ ಎನ್‌ಕೌಂಟರುಗಳ ಅವರು ಏನು ಹೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.
ಬಚ್ಚನ್ ಅವರನ್ನು ವಿರೋಧಿಸುತ್ತಿರುವವರು 'ಅಸ್ಪಶ್ಯತೆಯ ತಾಲಿಬಾನ್‌ಗಳು' ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಗುಜರಾತ್ ರಾಯಭಾರಿಯ ವಿರುದ್ಧ ಪಕ್ಷ ದಾಳಿ ನಡೆಸಿದೆ.
ಬಚ್ಚನ್ ನಿಜಕ್ಕೂ ಸಂವೇದನಾಶೀಲರಾಗಿದ್ದರೆ ಮತ್ತು ಸರಿಯಾದ ಪಥದಲ್ಲಿ ಯೋಚಿಸುವವರಾಗಿದ್ದರೆ ಗುಜರಾತ್ ಗಲಭೆಯನ್ನು ಪ್ರಬಲವಾಗಿ ಖಂಡಿಸಲಿ ಎಂದು ಇದೇ ಸಂದರ್ಭದಲ್ಲಿ ತಿವಾರಿ ಸವಾಲು ಹಾಕಿದ್ದಾರೆ.
ತಾನು ಗುಜರಾತ್ ರಾಜ್ಯದ ರಾಯಭಾರಿ ಮಾತ್ರ ಎಂದು ಹೇಳುವ ಮೂಲಕ ಬಚ್ಚನ್ ಮೋದಿ ಮತ್ತು 'ರನ್ ಆಫ್ ಕಛ್'ನ ಮರಳಿನ ನಡುವೆ ಚೀನಾದ ಗೋಡೆಯನ್ನು ಕಟ್ಟಬಾರದು ಎಂದೂ ಹೇಳಿದ್ದಾರೆ.
ಗುಜರಾತ್ ರಾಜ್ಯ ಕಾಂಗ್ರೆಸ್ ಘಟಕವು ಹಲವು ಪ್ರಮುಖ ಪ್ರಶ್ನೆಗಳನ್ನು ತಮ್ಮ ಮುಂದಿಟ್ಟಿದ್ದು, ಅವರ ಕಳವಳಗಳನ್ನು ಹೈಕಮಾಂಡ್ ಪುರಸ್ಕರಿಸುತ್ತಿದೆ ಎಂದು ತಿವಾರಿ ಹೇಳಿದ್ದಾರೆ.
ಮೋದಿಯ ನಿರಾಸೆಯ ಪ್ರತೀಕ... ಬಚ್ಚನ್ ವಿರೋಧಿಗಳು ತಾಲಿಬಾನ್‌ಗಳು ಎಂದು ಹೇಳಿದ್ದಕ್ಕೆ ಇದಕ್ಕೂ ಮೊದಲು ಟೀಕಾ ಪ್ರಹಾರ ನಡೆಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ, ಗೋದ್ರಾ ಗಲಭೆಯ ನಂತರ ಪ್ರಕರಣ ಸಂಬಂಧ ಸಿಟ್‌ನಿಂದ ದೀರ್ಘ ಕಾಲ ವಿಚಾರಣೆಗೊಳಗಾದ ಮುಖ್ಯಮಂತ್ರಿ ಆಶಾಭಂಗಕ್ಕೊಳಗಾಗಿದ್ದಾರೆ ಎಂದರು.
ಮೋದಿ ತೀವ್ರವಾಗಿ ನಿರಾಸೆಗೊಳಗಾಗಿದ್ದಾರೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಯಾಕೆಂದರೆ 63 ವರ್ಷಗಳಲ್ಲೇ ಮೊತ್ತ ಮೊದಲ ಬಾರಿಗೆ ದೇಶದ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯೊಬ್ಬರು ವಿಶೇಷ ತನಿಖಾ ತಂಡದೆದುರು 10 ಗಂಟೆಗಳ ಕಾಲ ಕುಳಿತು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸೋನಿ ಮಾತಿನ ಚಾಟಿಯೇಟು ಬೀಸಿದ್ದಾರೆ.