ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋಹತ್ಯೆಯಿಂದ ರಾಷ್ಟ್ರದ ಸ್ವಾಭಿಮಾನಕ್ಕೆ ಕುತ್ತು: ವರುಣ್ ಗಾಂಧಿ
(Cow slaughter | Varun Gandhi | Bharatiya Janata Party | BJP)
ಗೋಹತ್ಯೆಯಿಂದ ರಾಷ್ಟ್ರದ ಸ್ವಾಭಿಮಾನಕ್ಕೆ ಕುತ್ತು: ವರುಣ್ ಗಾಂಧಿ
ಸಹರಾಂಪುರ, ಮಂಗಳವಾರ, 30 ಮಾರ್ಚ್ 2010( 13:31 IST )
ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿರುವ ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯದರ್ಶಿ ವರುಣ್ ಗಾಂಧಿ, ಇದು ಸಾಮಾಜಿಕ ಅಪರಾಧಿ ಕೃತ್ಯವಾಗಿದ್ದು ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.
ಉತ್ತರ ಪ್ರದೇಶದ ಸಹರಾಂಪುರ ಜಿಲ್ಲೆಯಲ್ಲಿನ ಸಾರ್ವಜನಿಕ ರ‌್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಫಿಲಿಬಿಟ್ ಸಂಸದ ಗಾಂಧಿ, 'ಗೋವಧೆ ಕಾನೂನುಬದ್ಧ ಮತ್ತು ಸಾಮಾಜಿಕ ಅಪರಾಧಿ ಕೃತ್ಯವಾಗಿದೆ. ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲ. ರಾಷ್ಟ್ರದ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಗೋಹತ್ಯೆಯನ್ನು ನಿಷೇಧಿಸುವ ಅಗತ್ಯವಿದೆ' ಎಂದರು.
ಹಿಂದೂಗಳು ಆತ್ಮಗೌರವ ಮತ್ತು ಸ್ವಾಭಿಮಾನಕ್ಕಾಗಿ ಎದ್ದೇಳಬೇಕು ಎಂದಿರುವ ವರುಣ್ ಗಾಂಧಿ, ಗೋಹತ್ಯೆಯ ವಿರುದ್ಧದ ಹೋರಾಟಕ್ಕಾಗಿ ತನ್ನ ಆಸೆಯಂತೆ ಕನಿಷ್ಠ ಒಂದು ಲಕ್ಷ ಮಂದಿಯ ತಂಡವೊಂದನ್ನು ರಚಿಸುವ ಕಾರ್ಯ ಯಶಸ್ವಿಯಾಗಲಿದೆ ಎಂದೂ ಭರವಸೆ ವ್ಯಕ್ತಪಡಿಸಿದರು.
ಅಲ್ಲದೆ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿರುವ ಹೊರತಾಗಿಯೂ ಇದನ್ನು ಉಲ್ಲಂಘಿಸಿದ ಒಂದೇ ಒಂದು ಪ್ರಕರಣಗಳು ಯಾಕೆ ದಾಖಲಾಗಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
ನಿಮ್ಮ ತಾಯಿಗೆ ಯಾರಾದರೂ ಕೆಡುಕುಂಟು ಮಾಡಲು ಬಯಸಿದರೆ ನೀವೇನು ಮಾಡುತ್ತೀರಿ? ಖಂಡಿತಾ ನೀವು ನಿಮ್ಮ ಮಾತೆಗಾಗಿ ಹೋರಾಟ ನಡೆಸುತ್ತೀರಿ. ಆದರೆ ಇಂತಹ ಗಂಭೀರ ವಿಚಾರದ ಬಗ್ಗೆ ನಾವು ಯಾಕೆ ಮೌನಿಗಳಾಗಿದ್ದೇವೆ? ಜನ ಎದ್ದೇಳಬೇಕು ಮತ್ತು ನಮ್ಮ ತಾಯಿಯನ್ನು ರಕ್ಷಿಸಬೇಕು ಎನ್ನುವುದು ನನ್ನ ಬಯಕೆ ಎಂದು ಜನಸಮೂಹ 'ಜೈ ಶ್ರೀರಾಮ್' ಎಂಬ ಘೋಷಣೆಗಳನ್ನು ಕೂಗುತ್ತಿರುವ ಮಧ್ಯೆಯೇ ವರುಣ್ ಕರೆ ನೀಡಿದರು.
ಇತ್ತೀಚೆಗಷ್ಟೇ ಬರೇಲಿಯಲ್ಲಿ ನಡೆದ ಕೋಮುಗಲಭೆಗೆ ಉತ್ತರ ಪ್ರದೇಶ ಸರಕಾರವನ್ನೇ ಬೆಟ್ಟು ಮಾಡಿ ತೋರಿಸಿರುವ ವರುಣ್, ಹಿಂದೂಗಳ ಪವಿತ್ರ ಹಬ್ಬ ಹೋಳಿಯಂದೇ ಮುಸ್ಲಿಮರ ರ‌್ಯಾಲಿಗೆ ಅವಕಾಶ ನೀಡುವ ಮೂಲಕ ಪಿತೂರಿ ನಡೆಸಲಾಗಿತ್ತು ಎಂದು ಆರೋಪಿಸಿದ್ದಾರೆ.