ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋರ್ಟ್ ಆವರಣದಲ್ಲೇ ಧೂಮಪಾನ: ಒಪ್ಪಿಕೊಂಡ ಸುಪ್ರೀಂ (smoking | Supreme Court | Additional Registrar | Raj Pal Arora)
Bookmark and Share Feedback Print
 
ನಿಷೇಧದ ಹೊರತಾಗಿಯೂ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದ ಆವರಣದಲ್ಲಿ ಕೆಲವರು ಧೂಮಪಾನ ಮಾಡುತ್ತಿರುವುದು ಹೌದು ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಆದರೆ ಕಾನೂನು ಉಲ್ಲಂಘಿಸಿದವರಿಗೆ ಇದುವರೆಗೂ ದಂಡ ವಿಧಿಸಲಾಗಿಲ್ಲ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ಧೂಮಪಾನ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ ಎಂದು ವಕೀಲ ಬಲರಾಜ್ ಸಿಂಗ್ ಮಲಿಕ್ ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದುಕೊಂಡಿರುವ ಮಾಹಿತಿಯಲ್ಲಿ ಹೆಚ್ಚುವರಿ ರಿಜಿಸ್ಟ್ರಾರ್ ರಾಜ್ ಪಾಲ್ ಅರೋರಾ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ಧೂಮಪಾನ ಮಾಡಿರುವುದಕ್ಕಾಗಿ ಇದುವರೆಗೆ ಯಾರೊಬ್ಬರ ಮೇಲೂ ದಂಡ ಅಥವಾ ಪ್ರಕರಣ ದಾಖಲು ಮಾಡಲಾಗಿಲ್ಲ. ಧೂಮಪಾನ ಮಾಡುತ್ತಿರುವುದು ಕೆಲವು ಬಾರಿ ಪತ್ತೆಯಾದ ಸಂದರ್ಭದಲ್ಲಿ ಮುಂದೆ ಇಂತಹ ತಪ್ಪನ್ನು ಮಾಡದಂತೆ ಎಚ್ಚರಿಕೆ ನೀಡಿ ಬಿಟ್ಟು ಬಿಡಲಾಗಿದೆ ಎಂದು ಅಪೆಕ್ಸ್ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಮಾರಾಟ, ವ್ಯವಹಾರ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಯಂತ್ರಣ ಮತ್ತು ಜಾಹೀರಾತು ನಿಷೇಧ) ತಿದ್ದುಪಡಿ ಕಾಯ್ದೆಯಡಿ ಎಷ್ಟು ಮಂದಿಯ ಮೇಲೆ ದಂಡ ಅಥವಾ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನು ಅರ್ಜಿದಾರರು ಈ ಹಿಂದೆ ಕೇಳಿದ್ದರು.

ಸುಧಾರಣಾ ಕಾಯ್ದೆಯ ಪ್ರಕಾರ ಸಾರ್ವಜನಿಕ ಸ್ಥಳಗಳು, ಕೆಲಸ ಮಾಡುವ ಸ್ಥಳಗಳು ಮತ್ತು ಕಚೇರಿಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹಾಗೆ ಯಾರಾದರೂ ಮಾಡಿದಲ್ಲಿ ಧೂಮಪಾನಿಗಳ ಮೇಲೆ 200ರಿಂದ 1,000 ರೂಪಾಯಿಗಳವರೆಗೆ ದಂಡವನ್ನು ಸಂಬಂಧಪಟ್ಟ ಅಧಿಕಾರಿಗಳು ವಿಧಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ