ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಾಂತರಿ ಕ್ರೈಸ್ತರನ್ನೂ ಪರಿಶಿಷ್ಟರ ಪಟ್ಟಿಗೆ ಸೇರಿಸಿ: ಪ್ರಧಾನಿಗೆ ಕರುಣಾ (convert Christians | Tamil Nadu | M Karunanidhi | Manmohan Singh)
Bookmark and Share Feedback Print
 
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವುದನ್ನು ಖಚಿತಪಡಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸ್ವತಃ ಮಧ್ಯಪ್ರವೇಶಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಆಗ್ರಹಿಸಿದ್ದಾರೆ.

ಮತಾಂತರಗೊಂಡ ಕ್ರೈಸ್ತರನ್ನು ಪರಿಶಿಷ್ಟ ಜಾತಿಗಳ ವಿಭಾಗಕ್ಕೆ ಸೇರ್ಪಡೆಗೊಳಿಸಲು ಪ್ರಧಾನಿ ಸಿಂಗ್ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿರುವ ಕರುಣಾನಿಧಿ, ಕಾಯ್ದೆ ತಿದ್ದುಪಡಿ ಮೂಲಕ ಅವರಿಗೂ ಮೀಸಲಾತಿಯ ಪ್ರಯೋಜನಗಳು ಮತ್ತು ಎಲ್ಲಾ ರಿಯಾಯಿತಿಗಳನ್ನು ಒದಗಿಸುವ ಸಂಬಂಧ ಅಗತ್ಯ ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂ ಧರ್ಮವನ್ನು ಹೊರತುಪಡಿಸಿದ ಧರ್ಮದವರನ್ನು ಪರಿಶಿಷ್ಟ ಜಾತಿ ಅಡಿಯಲ್ಲಿ ಪರಿಗಣಿಸುವಂತಿಲ್ಲ ಎಂಬ ಸಂವಿಧಾನದಲ್ಲಿನ ಪರಿಶಿಷ್ಟ ಜಾತಿಗಳ ಕುರಿತ ಮೂರನೇ ಪ್ಯಾರಾದಲ್ಲಿರುವ 1950ರ ಮೂಲ ವಿಧಿಗೆ, ಆನಂತರ ಸಿಖ್ ಮತ್ತು ಬೌದ್ಧ ಧರ್ಮೀಯರನ್ನೂ ಸೇರಿಸಿಕೊಳ್ಳಲು ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿತ್ತೆಂಬುದನ್ನು ಕರುಣಾನಿಧಿ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾವು ಪಾಲಿಸುತ್ತಿರುವ ಧರ್ಮಗಳ ಹೊರತಾಗಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳ ಜನತೆ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳಿಂದ ಬಳಲುತ್ತಿದ್ದಾರೆ ಎನ್ನುವುದು ತಮಿಳುನಾಡು ಸರಕಾರದ ಅನಿಸಿಕೆ. ಹಾಗಾಗಿ ಸಂವಿಧಾನದಲ್ಲಿನ ಪರಿಶಿಷ್ಟ ಜಾತಿಗಳ 1950ರ ವಿಧಿಯ ಮೂರನೇ ಪ್ಯಾರಾವನ್ನು ಸಂಪೂರ್ಣವಾಗಿ ಅಳಿಸುವುದು ಸೂಕ್ತ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ