ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಷಾರ್...ಖಾಸಗಿಯಾಗಿ ಬೈದ್ರೂ ಅಪರಾಧ: ಹೈಕೋರ್ಟ್ (Mumbai High court | Police | Mumbai | Rathna mala)
Bookmark and Share Feedback Print
 
ವಾಕ್ ಸ್ವಾತಂತ್ರ್ಯ ಇದೆ ಎಂದು ಇನ್ಮುಂದೆ ಬಾಯಿಗೆ ಬಂದಂತೆ ಬೈಯ್ಯಬೇಡಿ ಎಚ್ಚರ, ಯಾಕೆಂದರೆ ಸಾರ್ವಜನಿಕವಾಗಿ ಮಾತ್ರವಲ್ಲ, ಖಾಸಗಿಯಾಗಿ ಬೈದರೂ ಅದು ಅಪರಾಧ ಎಂಬುದಾಗಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.

1999ರಲ್ಲಿ ಮುಂಬೈನ ರತ್ನಮಾಲಾ ಎಂಬವರು ತಮ್ಮ ಮನೆಯ ಬಾಗಿಲಲ್ಲಿ ನಿಂತಿರುವಾಗ ನೆರೆಮನೆಯ ಜಯಚಂದ್ ಪಾಟೀಲ್ ಅವರನ್ನು ಉದ್ದೇಶಿಸಿ ಬೈದಿದ್ದರು. ಈ ಬಗ್ಗೆ ರತ್ನಮಾಲಾ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ ಪಾಟೀಲ್ ಅವರಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಜಯಚಂದ್ ಅವರು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಾರ್ವಜನಿಕ ಸ್ಥಳವಾಗಲಿ ಅಥವಾ ಖಾಸಗಿಯಾಗಿ ಬೈದರೂ ಅದು ಅಪರಾಧ ಎನಿಸಿಕೊಳ್ಳುತ್ತದೆ ಎಂದು ಹೇಳಿದೆ. ಅಲ್ಲದೇ, ಆರೋಪಿ ಪಾಟೀಲ್‌ಗೆ ಒಂದು ತಿಂಗಳ ಶಿಕ್ಷೆ ವಿಧಿಸಿದೆ. ಇಂಥ ಪ್ರಕರಣಗಳಲ್ಲಿ ಶಿಕ್ಷೆಯನ್ನು ಮೂರು ತಿಂಗಳವರೆಗೆ ವಿಸ್ತರಿಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ