ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಂಡನನ್ನು ನೇಣಿಗೆ ಹಾಕುವ ಮೊದಲು ಆಕೆಗೆ ಮಗು ಬೇಕಂತೆ! (Sonia | Jasvir | Patiala Jail | conjugal rights)
Bookmark and Share Feedback Print
 
ಬಹುಶಃ ಭಾರತದಲ್ಲಿ ಇಂತಹ ಪ್ರಕರಣವೊಂದು ನ್ಯಾಯಾಲಯದ ಮುಂದೆ ಬರುತ್ತಿರುವುದು ಇದೇ ಮೊದಲು. ತಮ್ಮ ಪಾಪ ಕೃತ್ಯಕ್ಕಾಗಿ ಜೈಲು ಸೇರಿರುವ ಗಂಡ-ಹೆಂಡತಿಯರಲ್ಲಿ ಆತ ಮರಣ ದಂಡನೆ ಎದುರಿಸುತ್ತಿದ್ದರೆ, ಆಕೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಗಂಡ ಸಾಯುವ ಮೊದಲು ತಮಗೆ ಜೈಲಿನಲ್ಲೇ ಸಂಸಾರ ನಡೆಸಲು ಅವಕಾಶ ನೀಡಬೇಕೆನ್ನುವುದು ಅವರ ಬೇಡಿಕೆ!

ಮದುವೆಯಾಗಿ ಎಂಟು ತಿಂಗಳಾಗುವಷ್ಟರಲ್ಲಿ ಎಲ್ಲರಂತೆ ತಾವೂ ಐಷಾರಾಮಿ ಜೀವನ ನಡೆಸಬೇಕೆಂದು ಬಯಸಿದ್ದ ಜಸ್ವೀರ್ ಮತ್ತು ಸೋನಿಯಾ ಹಿಡಿದದ್ದು ಅಡ್ಡದಾರಿ. ದಿಢೀರ್ ಶ್ರೀಮಂತರಾಗುವ ಭರದಲ್ಲಿ ಪಂಜಾಬ್‌ನ ಹೊಶಿಯಾರ್ಪುರದಲ್ಲಿನ ಉದ್ಯಮಿಯೊಬ್ಬರ 16ರ ಹರೆಯದ ಪುತ್ರನನ್ನು ಅಪಹರಿಸಿ ಬಿಡುಗಡೆಗಾಗಿ 50 ಲಕ್ಷ ರೂಪಾಯಿ ಒತ್ತೆ ಹಣವನ್ನೂ ಅವರು ಕೇಳಿದ್ದರು.
ಜಸ್ವೀರ್ - ಸೋನಿಯಾ ಮದುವೆ ಭಾವಚಿತ್ರ
PR


ಹುಡುಗನನ್ನು ಸುಮ್ಮನಿರಿಸಲು ಮತ್ತು ಬರಿಸುವ ಔಷಧಿಯನ್ನು ಕೊಟ್ಟಿದ್ದೇ ಆತನ ಜೀವಕ್ಕೆ ಎರವಾಗಿತ್ತು. ಇದೇ ಸಂಬಂಧ ದಂಪತಿ ವಿರುದ್ಧ ಕೊಲೆ ಪ್ರಕರಣ ದಾಖಲಾಯಿತು. ಜೈಲು ಸೇರಿದ ದಂಪತಿಗೆ ಜಿಲ್ಲಾ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಇದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಎತ್ತಿ ಹಿಡಿಯಿತು. ಆದರೆ ಸುಪ್ರೀಂ ಕೋರ್ಟ್ ಜಸ್ವೀರ್‌ಗೆ ಮಾತ್ರ ಮರಣ ದಂಡನೆ ಖಾತ್ರಿಪಡಿಸಿ, ಸೋನಿಯಾಳನ್ನು ಜೀವಾವಧಿ ಶಿಕ್ಷೆಗೆ ಸೀಮಿತಗೊಳಿಸಿತು.

ಅವರಿಗೆ ಮಗು ಬೇಕಂತೆ...
ಜಸ್ವೀರ್ ತಂದೆ-ತಾಯಿಗೆ ಒಬ್ಬನೇ ಒಬ್ಬ ಪುತ್ರ. ಹಾಗಾಗಿ ತಮ್ಮ ವಂಶದ ಕುಡಿಯನ್ನು ಬೆಳೆಸಲು ಮಗುವಿನ ಅವಶ್ಯಕತೆಯಿದ್ದು, ನಮಗೆ ಜೈಲಿನಲ್ಲೇ ಸಂಸಾರ ಹೂಡಲು ಅವಕಾಶ ನೀಡಬೇಕು ಎಂದು ದಂಪತಿಯೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಗಂಡನನ್ನು ನೇಣಿಗೇರಿಸುವ ಮೊದಲು ಅವರ ವಂಶದ ಮಗುವೊಂದನ್ನು ಪಡೆಯಬೇಕೆನ್ನುವುದು ನನ್ನ ಆಸೆ. ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ. ಕನಿಷ್ಠ ಅವರು ಸಾಯುವ ಹೊತ್ತಿಗೆ ನಾನು ಗರ್ಭವತಿಯಾದರೂ ಸಾಕು ಎಂದು ಅವರು ಮನವಿ ಮಾಡಿದ್ದಾಳೆ.

ಗಂಡನನ್ನು ನೇಣಿಗೇರಿಸುವ ಮೊದಲು ಅವರ ವಂಶದ ಮಗುವೊಂದನ್ನು ಪಡೆಯಬೇಕೆನ್ನುವುದು ನನ್ನ ಆಸೆ. ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ. ಕನಿಷ್ಠ ಅವರು ಸಾಯುವ ಹೊತ್ತಿಗೆ ನಾನು ಗರ್ಭವತಿಯಾದರೂ ಸಾಕು ಎಂದು ಅವರು ಮನವಿ ಮಾಡಿದ್ದಾಳೆ.

ಬ್ರೆಜಿಲ್, ಡೆನ್ಮಾರ್ಕ್, ಕೆನಡಾ, ಆಸ್ಟ್ರೇಲಿಯಾ, ರಷ್ಯಾ, ಬ್ರಿಟನ್ ಮತ್ತು ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಕೈದಿಗಳಿಗೆ ಜೈಲಿನಲ್ಲೇ ದಾಂಪತ್ಯ ನಡೆಸಲು ಅವಕಾಶ ನೀಡಲಾಗುತ್ತದೆ. ಹಾಗಾಗಿ ನಮ್ಮಲ್ಲೂ ನೀಡಬಹುದು ಎಂದು ಅವರ ವಕೀಲ ಗುರುಶರಣ್ ಕೌರ್ ವಿವರಿಸಿದ್ದಾರೆ.

ಇದುವರೆಗೂ ನಮಗೆ ಇಂತಹ ಯಾವುದೇ ಉದಾಹರಣೆ ಸಿಕ್ಕಿಲ್ಲ. ಈ ಕುರಿತು ಯಾವುದೇ ನಿಯಮಾವಳಿಗಳೂ ನಮ್ಮಲ್ಲಿಲ್ಲ. ಅವರು ಜೈಲಿನ ಪ್ರತ್ಯೇಕ ಕೋಣೆಗಳಲ್ಲಿರುವುದರಿಂದ ಒಟ್ಟಿಗೆ ಇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪಾಟಿಯಾಲಾ ಸೆಂಟ್ರಲ್ ಜೈಲಿನ ಸೂಪರಿಂಟೆಂಡೆಂಟ್ ಜೀವನ್ ಗಾರ್ಗ್ ಹೇಳುತ್ತಾರೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೇ 24ರಂದು ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.

ಒಂದು ವೇಳೆ ನ್ಯಾಯಾಲಯವು ಅವರಿಬ್ಬರಿಗೆ ಒಂದೇ ಕೊಠಡಿಯಲ್ಲಿ ಸಂಸಾರ ನಡೆಸಲು ಅವಕಾಶ ನೀಡಿದ ನಂತರ ಮಗು ಹುಟ್ಟಿದಲ್ಲಿ ಆ ಮಗುವಿನ ಲಾಲನೆ-ಪಾಲನೆ ವಿಚಾರ ಕೂಡ ತಲೆ ನೋವಿಗೆ ಕಾರಣವಾಗಲಿದೆ. ಆ ಮಗುವನ್ನು ಹೆತ್ತವರೊಂದಿಗೆ ಬಿಡುವುದೋ ಅಥವಾ ಸರಕಾರಿ ಅತಿಥಿ ಗೃಹದಲ್ಲಿರಿಸುವುದೋ ಅಥವಾ ಅಜ್ಜ-ಅಜ್ಜಿ ಬಳಿ ಬಿಡುವುದೋ -- ಇಂತಹ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ