ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾ ರಾಜ್ಯದಲ್ಲಿ ಪ್ರತಿಮೆ ಕಾಯಲು ಪ್ರತ್ಯೇಕ ಯೋಧರು! (Guards for statues | Uttar Pradesh | Mayawati | B L Joshi)
Bookmark and Share Feedback Print
 
ರಾಜ್ಯದಾದ್ಯಂತ ನಿರ್ಮಿಸಲಾಗಿರುವ ವಿವಾದಿತ ಪ್ರತಿಮೆಗಳು ಮತ್ತು ಸ್ಮಾರಕಗಳನ್ನು ಕಾಯಲು ಪ್ರತ್ಯೇಕ ಕಾವಲುಪಡೆಯನ್ನು ರಚಿಸಲು ಮುಂದಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರು ರಾಜ್ಯಪಾಲರ ಒಪ್ಪಿಗೆಗೂ ಕಾಯದೆ ಉದ್ಧಟತನ ತೋರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇಂತಹ ಒಂದು ಭದ್ರತಾ ಪಡೆಯನ್ನು ರಚಿಸಲು ಅಗತ್ಯವಿರುವ ವಿಧೇಯಕಕ್ಕೆ ಉತ್ತರ ಪ್ರದೇಶ ರಾಜ್ಯಪಾಲ ಬಿ.ಎಲ್. ಜೋಷಿ ಇನ್ನೂ ಸಹಿ ಹಾಕಿಲ್ಲ. ಆದರೂ ಅದನ್ನು ಲೆಕ್ಕಿಸದೆ ಮುಂದುವರಿದಿರುವ ಮಾಯಾವತಿ, ರಾಜ್ಯದಲ್ಲಿನ ಒಂಬತ್ತು ಪಾರ್ಕ್‌ಗಳು, ಸ್ಮಾರಕಗಳು ಮತ್ತು ತನ್ನದ ಮನೆಯ ಕಾವಲಿಗಾಗಿ ಸುಮಾರು 1,200 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಈ ಸಂಬಂಧ ಶುಕ್ರವಾರ ಅಪರಾಹ್ನ ಮಾಯಾವತಿಯವರು ಸಂಪುಟ ಸಭೆಯನ್ನು ಕರೆದಿದ್ದು, ನೂತನ ಪಡೆಯನ್ನು ರಚಿಸುವ ಸಂಬಂಧ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಪಡೆಗೆ ಕರ್ನರ್ ರ‌್ಯಾಂಕಿನ ಸೇನೆಯ ನಿವೃತ್ತ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ.

ಅದೇ ಹೊತ್ತಿಗೆ ರಾಜ್ಯಪಾಲರ ಒಪ್ಪಿಗೆಯಿಲ್ಲದೆ ಇಂತಹ ನಿರ್ಧಾರಕ್ಕೆ ಬಂದಿರುವ ಸರಕಾರದ ನಿರ್ಧಾರವನ್ನು ರಾಜ್ಯ ಸಂಪುಟ ಕಾರ್ಯದರ್ಶಿ ಶಶಾಂಕ್ ಶೇಖರ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಈ ಕಾಯ್ದೆಯ ಜರೂರತ್ತನ್ನು ಗಮನಕ್ಕೆ ತೆಗೆದುಕೊಂಡ ಸಂಪುಟವು, ಮಾಜಿ ಯೋಧರನ್ನು ವಿಶೇಷ ಪಡೆಗೆ ಸೇರ್ಪಡೆಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡ ನಂತರ ವಿಧೇಯಕವನ್ನು ರಾಜ್ಯಪಾಲರ ಸಹಿಗೆಂದು ಈ ಹಿಂದೆ ಎರಡೆರಡು ಬಾರಿ (ಫೆಬ್ರವರಿ 18 ಮತ್ತು ಮಾರ್ಚ್ 18) ಕಳುಹಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲ ಜೋಷಿಯವರು ಸ್ಪಷ್ಟನೆ ಕೇಳಿ ಅದನ್ನು ವಾಪಸ್ ಕಳುಹಿಸಿದ್ದರು.

ಆದರೆ ಈಗ ಸರಕಾರ ಮತ್ತೊಂದು ಹೇಳಿಕೆ ನೀಡುತ್ತಿದೆ. ಅದರ ಪ್ರಕಾರ ಈ ವಿಶೇಷ ಪಡೆಯುವ ಬಂಧಿಸುವ ಅಥವಾ ತಪಾಸಣೆ ನಡೆಸುವ ಅಧಿಕಾರ ಹೊಂದಿಲ್ಲದೆ ಇರುವುದರಿಂದ ಇದಕ್ಕೆ ಕಾನೂನನ್ನು ರೂಪಿಸುವ ಅಗತ್ಯವಿಲ್ಲ.

ಸುಮಾರು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಾದ್ಯಂತ ನಿರ್ಮಿಸಲಾಗಿರುವ ದಲಿತ ನಾಯಕರ ನೂರಾರು ಪ್ರತಿಮೆಗಳನ್ನು ರಕ್ಷಿಸಲು ಈ ಪಡೆಯನ್ನು ರಚಿಸಲಾಗುತ್ತಿದ್ದು, ಅಂದಾಜುಗಳ ಪ್ರಕಾರ ವಿಶೇಷ ಪಡೆಗಾಗಿ ಸರಕಾರ ವಾರ್ಷಿಕವಾಗಿ ಎಂಟು ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ