ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಿಲಿಟರಿ ಬಳಸಲ್ಲ, ಮಾತುಕತೆಗೆ ಬನ್ನಿ: ನಕ್ಸಲರಿಗೆ ಚಿದಂಬರಂ (Naxal | West Bengal | union home minister | P Chidambaram)
Bookmark and Share Feedback Print
 
ಪಶ್ಚಿಮ ಬಂಗಾಲದ ನಕ್ಸಲರ ಕೇಂದ್ರ ಭಾಗ ಲಾಲಗಢಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾತುಕತೆಗೆ ಮುಂದಾಗುವಂತೆ ಮಾವೋವಾದಿಗಳಿಗೆ ಮತ್ತೆ ಆಹ್ವಾನ ನೀಡಿದ್ದಾರೆ. ಜತೆಗೆ ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ಮಿಲಿಟರಿಯನ್ನು ಬಳಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲಗಢಕ್ಕೆ ತನ್ನ ಮೊದಲನೇ ಭೇಟಿಯಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದ ಚಿದಂಬರಂ, ಕಾನೂನು ಮತ್ತು ಸುವ್ಯವಸ್ಥೆ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರಿಗಿದೆ ಎಂಬುದನ್ನು ನಾನು ಮಾತುಕತೆ ಸಂದರ್ಭದಲ್ಲಿ ಹೇಳಿದ್ದೇನೆ ಎಂಬುದನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ನಕ್ಸಲರನ್ನು ಪುಕ್ಕಲರು ಎಂದು ಸಚಿವರು ಬಣ್ಣಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವುದಲ್ಲದೆ, ಬುಡಕಟ್ಟು ಜನರ 'ಪೊಲೀಸ್ ದೌರ್ಜನ್ಯ ವಿರುದ್ಧದ ಜನತೆಯ ಸಮಿತಿ'ಯನ್ನು (ಪಿಸಿಪಿಎ) ಬಳಸುತ್ತಿರುವುದಕ್ಕೆ ಸಚಿವರು ಈ ನಿರ್ದಿಷ್ಟ ಪದವನ್ನು ಬಳಸಿದರು.

ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿರುವ ಪಿಸಿಪಿಎ ಸಂಘಟನೆಯು ಪಶ್ಚಿಮ ಮಿಡ್ನಾಪುರ, ಪುರುಲಿಯಾ ಮತ್ತು ಬಂಕುರಾ ಜಿಲ್ಲೆಗಳಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು.

ನಕ್ಸಲರ ವಿರುದ್ಧ ರಾಜ್ಯ ಪೊಲೀಸರು, ರಾಜ್ಯದ ಶಸ್ತ್ರಾಸ್ತ್ರ ಪಡೆಗಳು ಮತ್ತು ಅರೆ ಸೇನಾಪಡೆಗಳು ಹೋರಾಡಲಿವೆ. ಇವರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಯಾವುದೇ ಯೋಚನೆ ನಮ್ಮಲ್ಲಿಲ್ಲ ಎಂದು ಸುದೀರ್ಘ ಸಮಯ ನಡೆದ ಪೊಲೀಸ್ ಮತ್ತು ಅಧಿಕಾರಿಗಳ ಸಂಪರ್ಕ ಸಭೆಯ ನಂತರ ಚಿದಂಬರಂ ತಿಳಿಸಿದ್ದಾರೆ.

ನಕ್ಸಲರು ಹೆದರು ಪುಕ್ಕಲರು. ಅವರು ಕಾಡಿನಲ್ಲಿ ಯಾಕೆ ಅಡಗಿಕೊಂಡಿದ್ದಾರೆ? ನಾವು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದೇವೆ. ಆದರೆ ಅವರು ಹಿಂಸಾಚಾರ ನಡೆಸುತ್ತಿದ್ದಾರೆ. ಅವರು ನಿಜಕ್ಕೂ ಅಭಿವೃದ್ಧಿ ಬಯಸುತ್ತಿರುವರಾದರೆ, ನಿಜಕ್ಕೂ ಜನರ ಸಮಸ್ಯೆಗಳನ್ನು ಬಗೆಹರಿಸಲು ಬಯಸುತ್ತಿರುವುದು ಹೌದಾದರೆ, ನಮ್ಮಿಂದ ಮಾತುಕತೆಗೆ ಸ್ವಾಗತವಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ