ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಛತ್ವಾಲ್‌ಗೆ ಪದ್ಮಭೂಷಣ ಪ್ರಶ್ನಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ (Padma Bhushan | Delhi High Court | Sant Singh Chatwal | Madan B Lokur)
Bookmark and Share Feedback Print
 
ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಸಂತಾ ಸಿಂಗ್ ಛತ್ವಾಲ್ ಅವರಿಗೆ ಕೇಂದ್ರ ಸರಕಾರವು ಪದ್ಮಭೂಷಣ ಗೌರವ ನೀಡುವುದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಪಿ ಮಲ್ಹೋತ್ರಾ ಅವರು ಈ ಸಂಬಂಧ ಮೂಲ ದಾಖಲೆಗಳನ್ನು ಒದಗಿಸಿದ ನಂತರ ತೀರ್ಪು ನೀಡಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ನೇತೃತ್ವದ ಪೀಠವು, ಛತ್ವಾಲ್ ಪ್ರಕರಣದಲ್ಲಿ ಕೇಂದ್ರವು ವಿಧಿವಿಧಾನಗಳನ್ನು ಅನುಸರಿಸಿಲ್ಲ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿತು.

ಪ್ರತಿಷ್ಠಿತ ಗೌರವಕ್ಕೆ ಛತ್ವಾಲ್ ಅವರ ಹೆಸರನ್ನು ಪರಿಗಣಿಸುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿದೆ ಎಂದು ದೂರು ಸಲ್ಲಿಸಿದ್ದ ಎಸ್.ಕೆ. ಶಾಹ್ ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯವು ಮಾರ್ಚ್ 25ರಂದು ಆದೇಶ ನೀಡಿತ್ತು.

ಅರ್ಜಿದಾರರ ಹೆಸರುಗಳನ್ನು ಅಂತಿಮಗೊಳಿಸುವ ಮೊದಲು ಅನುಸರಿಸಬೇಕಾದ ನಿಯಮಗಳನ್ನು, ವಿಧಿಗಳನ್ನು ಪಾಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೇಮಕಗೊಳಿಸಲಾಗಿದೆ. ಆ ಸಮಿತಿಯು ಎಲ್ಲಾ ಅಗತ್ಯ ನಿಯಮಗಳನ್ನು ಪಾಲಿಸಿದೆ ಎಂದು ಸಂಬಂಧಪಟ್ಟ ದಾಖಲೆಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹಾಗಾಗಿ ಯಾವುದೇ ನಿರಾಧಾರ ಆರೋಪಗಳನ್ನು ಮಾಡುವಂತಿಲ್ಲ. ಎಲ್ಲಾ ಅಗತ್ಯಗಳನ್ನು ಪರಿಗಣಿಸುವ ಉನ್ನತ ಮಟ್ಟದ ಸಮಿತಿಯ ವರದಿಯೂ ಇಲ್ಲಿದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿತು.

ಛತ್ವಾಲ್ ಅವರು ಸಾಕಷ್ಟು ಹಣಕಾಸು ಅವ್ಯವಹಾರಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಾಹ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ