ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೇತಾಜಿ ಹುಟ್ಟಿದ ದಿನವನ್ನು 'ದೇಶಪ್ರೇಮ ದಿನ' ಎನ್ನಲಾಗದು: ಕೇಂದ್ರ (Netaji birthday | Desh Prem Divas | Netaji Subhash Chandra Bose | Day of Patriotism)
Bookmark and Share Feedback Print
 
ನಿರೀಕ್ಷೆಯಂತೆ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನವನ್ನು (23-01-1897) 'ದೇಶಪ್ರೇಮ ದಿನ' ಎಂದು ಘೋಷಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಿರಾಕರಿಸಿದ್ದು, ಇದು ಸೂಕ್ತವಲ್ಲ ಎಂಬ ಉತ್ತರ ನೀಡಿದೆ.

ಪಶ್ಚಿಮ ಬಂಗಾಲದ 'ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್' ಪಕ್ಷದ ರಾಜ್ಯಸಭಾ ಸದಸ್ಯ ಬರೂನ್ ಮುಖರ್ಜಿ ನೀಡಿದ್ದ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ, ಆದರೆ ಹಾಗೆ ಮಾಡುವುದು ಉಚಿತವಲ್ಲ ಎಂದು ಕೇಂದ್ರ ಯೋಜನೆ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಹಾಗೂ ಸಂಸ್ಕೃತಿ ಸಚಿವಾಲಯದ ಉಸ್ತುವಾರಿ ವಿ. ನಾರಾಯಣ ಸಾಮಿ ತಿಳಿಸಿದ್ದಾರೆ.

ವರ್ಷದ ಒಂದು ದಿನವನ್ನು 'ದೇಶಪ್ರೇಮ ದಿವಸ'ವೆಂದು ಯಾವುದೇ ನಿರ್ದಿಷ್ಟ ವ್ಯಕ್ತಿಯ ಹುಟ್ಟುಹಬ್ಬವನ್ನು ಘೋಷಿಸುವುದು ಉಚಿತವಲ್ಲ ಎಂದು ಮುಖರ್ಜಿಯವರಿಗೆ ಸಚಿವರು ಉತ್ತರಿಸಿದ್ದಾರೆ. ಈ ಹೇಳಿಕೆಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಲಾಗಿದೆ.

ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಸಿದ್ಧಾಂತಗಳಿಗೆ ವಿರುದ್ಧವಾಗಿರುವುದು ಮತ್ತು ನೆಹರೂ ಕುಟುಂಬವನ್ನು ಅಷ್ಟಾಗಿ ಹಚ್ಚಿಕೊಳ್ಳದೇ ಇದ್ದುದು ಅವರ ಬಗೆಗಿನ ಕಾಂಗ್ರೆಸ್ ನಿರ್ಲಕ್ಷ್ಯಕ್ಕೆ ಕಾರಣ. ಇದೇ ಕಾರಣದಿಂದ ಅವರ ಸಾವಿನ ಕುರಿತ ರಹಸ್ಯವನ್ನು ಇನ್ನೂ ಬಹಿರಂಗಪಡಿಸಲಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಾ ಬಂದಿವೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದುಕೊಂಡು ಬಂದಿದೆ.

ಅದೇ ಹೊತ್ತಿಗೆ ಮಹಾತ್ಮಾ ಗಾಂಧಿಯವರ ಹುಟ್ಟುಹಬ್ಬವನ್ನು ಭಾರತದ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಪಟ್ಟ ಯಾವುದೇ ವಿಶೇಷ ದಿನವೆಂದು ಸರಕಾರ ಘೋಷಿಸಿಲ್ಲ ಎಂಬ ವಿಚಾರವನ್ನೂ ಸಚಿವರು ಬೆಟ್ಟು ಮಾಡಿ ತೋರಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಶ್ರೇಷ್ಠರು ಪಾಲ್ಗೊಂಡು ಅಗಾಧ ಕೊಡುಗೆಯನ್ನು ನೀಡಿದ್ದು, ಅದನ್ನು ಈ ರೀತಿಯಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ ಬಂದಿರುವ ಮನವಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಚಿವ ಸಾಮಿ ವಿವರಣೆ ನೀಡಿದ್ದಾರೆ.

ಭಾರತದ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಜನವರಿ 23ನ್ನು 'ದೇಶಪ್ರೇಮ ದಿನ' ಅಥವಾ 'ದೇಶಭಕ್ತಿ ದಿನ' ಎಂದು ಘೋಷಿಸಬೇಕು ಎಂದು 2008ರಲ್ಲಿ ರಾಜ್ಯಸಭೆಯಲ್ಲಿ ಮುಖರ್ಜಿಯವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ವರ್ಷದ ಬಳಿಕ 2009ರ ಡಿಸೆಂಬರ್ ತಿಂಗಳಲ್ಲಿ ಸಿಪಿಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿಗಳ ಪ್ರಧಾನ ಕಾರ್ಯದರ್ಶಿಗಳು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು, ಜನವರಿ 23ನ್ನು ದೇಶಪ್ರೇಮ ದಿನ ಎಂದು ಘೋಷಿಸುವಂತೆ ಬೇಡಿಕೆ ಸಲ್ಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ