ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಯಿಬ್‌ಗೆ ಫತ್ವಾ; ಸಾನಿಯಾ ಮದುವೆ ಈಗಾಗಲೇ ನಡೆದಿದೆ? (Shoaib Malik | Islamic fatwa | Ayesha Siddiqui | Sania Mirza)
Bookmark and Share Feedback Print
 
ಹೈದರಾಬಾದ್ ಹುಡುಗಿ ಆಯೇಶಾ ಸಿದ್ಧಿಕಿಯನ್ನು ಮದುವೆಯಾದ ಬಳಿಕ ತೊರೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಹಾಗೂ ಸಾನಿಯಾ ಮಿರ್ಜಾ ಭಾವೀ ಪತಿ ಶೋಯಿಬ್ ಮಲಿಕ್ ವಿರುದ್ಧ ಕೊಲ್ಕತ್ತಾದ ಮುಸ್ಲಿಂ ಧಾರ್ಮಿಕ ಗುರುವೊಬ್ಬರು ಫತ್ವಾ ಹೊರಡಿಸಿದ್ದಾರೆ. ಈ ನಡುವೆ ಸಾನಿಯಾ ಮತ್ತು ಶೋಯಿಬ್ ನಡುವಿನ ಮದುವೆ ಈಗಾಗಲೇ ನಡೆದಿದೆ ಎಂಬ ಗುಸುಗುಸು ಕೂಡ ಕೇಳಿ ಬರುತ್ತಿದೆ.

ಇಲ್ಲಿನ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಆಗಿರುವ ಸೈಯದ್ ನೂರ್ ಉರ್ ರೆಹಮಾನ್ ಬರ್ಕಾತಿಯವರು ಈ ಫತ್ವಾ ಹೊರಡಿಸಿದ್ದು, ಶೋಯಿಬ್ ಮತ್ತು ಆಯೇಶಾ ದೂರವಾಣಿ ಮೂಲಕ ಮದುವೆಯಾಗಿರುವುದರಿಂದ ಅವರಿಬ್ಬರು ಪತಿ-ಪತ್ನಿಯರು ಎಂದು ತಿಳಿಸಿದ್ದಾರೆ.
PTI

ದೂರವಾಣಿ ಮೂಲಕ ನಿಖಾ ನಡೆಸಲಾಗಿದೆ. ಮುಸ್ಲಿಂ ಕಾನೂನಿನ ಪ್ರಕಾರ ಅವರಿಬ್ಬರೂ ಈಗ ಗಂಡ-ಹೆಂಡತಿ. ಆ ನಿಖಾವನ್ನು ಶೋಯಿಬ್ ಒಪ್ಪಿಕೊಂಡರೆ ಸಮಸ್ಯೆಯಿಲ್ಲ. ಅದರ ಹೊರತು ಅದನ್ನು ನಿರಾಕರಿಸಿದರೆ, ಅವರು ಮುಸ್ಲಿಂ ಸಮಾಜದಿಂದ ಹೊರಗೆ ಹೋಗಬೇಕಾಗುತ್ತದೆ ಎಂದು ಇಮಾಮ್ ಎಚ್ಚರಿಕೆ ನೀಡಿದ್ದಾರೆ.

ಸಾನಿಯಾ-ಶೋಯಿಬ್ ಮದುವೆಯಾಗಿದ್ದಾರೆ?
ಹಾಗೊಂದು ಗುಸುಗುಸು ಸುದ್ದಿ ಸಾನಿಯಾ ಮನೆಯ ಹೊರಗಡೆಯೂ ಠಳಾಯಿಸುತ್ತಿದೆ. ಮೂಲಗಳ ಪ್ರಕಾರ ಸಾನಿಯಾ ಮತ್ತು ಶೋಯಿಬ್ ಈಗಾಗಲೇ ದುಬೈಯಲ್ಲಿ ಮದುವೆಯಾಗಿದ್ದಾರೆ. ಹೈದರಾಬಾದ್‌ನಲ್ಲಿ ಏಪ್ರಿಲ್ 15ರಂದು ನಡೆಯಲಿರುವುದು ಕೇವಲ ಔತಣಕೂಟ ಮಾತ್ರ.

ಇದಕ್ಕೆ ಪೂರಕವೆಂಬಂತೆ ಹೈದರಾಬಾದ್‌ನ ತಾಜ್ ಕೃಷ್ಣ ಪಂಚತಾರಾ ಹೊಟೇಲನ್ನು ಕೇವಲ ಔತಣಕೂಟಕ್ಕಾಗಿ ಮಾತ್ರ ಬುಕ್ ಮಾಡಿರುವುದು ಮತ್ತು ಮದುವೆ ಕಾಗದದಲ್ಲಿ ನಿಖಾ ಕುರಿತು ಯಾವುದೇ ಪ್ರಸ್ತಾಪವಿಲ್ಲದೇ ಇರುವುದು ಸಂಶಯಗಳಿಗೆ ಎಡೆ ಮಾಡಿದೆ. ಆದರೆ ಸ್ಥಳೀಯರ ಪ್ರಕಾರ ನಿಖಾವನ್ನು ಖಾಸಗಿ ಸಮಾರಂಭ ಎಂದು ಮುಗಿಸುತ್ತಾರೆ, ಬಳಿಕ ಔತಣಕೂಟಕ್ಕೆ ಮಾತ್ರ ಹಿತೈಷಿಗಳನ್ನು ಆಹ್ವಾನಿಸುತ್ತಾರೆ ಎಂದಿದ್ದಾರೆ.

ಮದುವೆಗಿಂತ ಮೊದಲೇ ಸಾನಿಯಾ ಮನೆಯಲ್ಲಿ ವಾರಗಟ್ಟಲೆ ಉಳಿದುಕೊಂಡಿರುವುದು, ಸಾನಿಯಾ ಮತ್ತು ಆಕೆಯ ಕುಟುಂಬ ತನ್ನ ಭಾವೀ ಗಂಡನಿಗೆ ಭಾರೀ ಬೆಂಬಲ ಸೂಚಿಸುತ್ತಿರುವುದು ಮುಂತಾದ ಅಂಶಗಳು ಕೂಡ ಅವರಿಬ್ಬರ ನಡುವಿನ ಮದುವೆ ನಡೆದಿದೆ ಎಂಬ ಅಂಶಗಳಿಗೆ ಪೂರಕವಾಗಿದೆ. ಹಾಗಾಗಿ ಅವರಿಬ್ಬರು ಕೇವಲ ನಿಶ್ಚಿತಾರ್ಥ ಮುಗಿಸಿಕೊಂಡಿರುವುದು ಮಾತ್ರವಲ್ಲ, ಮದುವೆಯಾಗಿ ಗಂಡ-ಹೆಂಡತಿಯಾಗಿದ್ದಾರೆ ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.

ಮದುವೆ ಮುಂದಕ್ಕೆ?
ಇದು ಮೇಲಿನ ಗುಸುಗುಸು ಸುದ್ದಿಗೆ ವ್ಯತಿರಿಕ್ತವಾದ ವರದಿ. ಕಳೆದ ಕೆಲವು ದಿನಗಳಿಂದ ಆಯೇಶಾ ವಿವಾದ ತಾರಕಕ್ಕೇರಿರುವುದರಿಂದ ಮದುವೆ ಮುಂದೂಡುವ ಸಾಧ್ಯತೆಗಳನ್ನು ಸಾನಿಯಾ ಕುಟುಂಬ ಸಂಪೂರ್ಣವಾಗಿ ತಳ್ಳಿ ಹಾಕುತ್ತಿಲ್ಲ.

ಸಾನಿಯಾ ಕುಟುಂಬದ ಆಪ್ತ ಹಾಗೂ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ವಿ. ಚಾಮುಂಡೇಶ್ವರನಾಥ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, 'ಮದುವೆಯನ್ನು ಮುಂದೂಡುವ ಕುರಿತು ಯಾವುದೇ ನಿರ್ಧಾರವನ್ನು ಇದುವರೆಗೆ ತೆಗೆದುಕೊಳ್ಳಲಾಗಿಲ್ಲ. ಆದರೆ ಎಲ್ಲಾ ವಿಚಾರಗಳೂ ಮುಕ್ತವಾಗಿವೆ' ಎಂದಿದ್ದಾರೆ.

ಶೋಯಿಬ್ ಶುಕ್ರವಾರ ಸಾನಿಯಾ ಮನೆಗೆ ಬಂದ ನಂತರ ಪ್ರತಿ ದಿನ ಸಾನಿಯಾ ಮನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಾಮುಂಡೇಶ್ವರನಾಥ್, ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದಾರೆ.
PTI

ಆಯೇಶಾ-ಶೋಯಿಬ್ ವಿವಾಹಕ್ಕೆ ಮಾನ್ಯತೆಯಿಲ್ಲ...
ಹೀಗೆಂದು ಹೇಳಿರುವುದು ಶೋಯಿಬ್ ಅವರ ಬಾವ ಇಮ್ರಾನ್ ಮಲಿಕ್. ಪಾಕಿಸ್ತಾನದಿಂದ ದೆಹಲಿಗೆ ಆಗಮಿಸಿರುವ ಇಮ್ರಾನ್, ಶೋಯಿಬ್ ಅವರ ವಕೀಲ ರಮೇಶ್ ಗುಪ್ತಾ ಅವರ ಜತೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದು ಆಯೇಶಾ ಜತೆಗಿನ ವಿವಾಹಕ್ಕೆ ಯಾವುದೇ ರೀತಿಯ ಮಾನ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಯೇಶಾ ಬೇರೆ ಹೆಸರಿನಲ್ಲಿ ಸಂಬಂಧ ಬೆಳೆಸುವ ಮೂಲಕ ಶೋಯಿಬ್‌ಗೆ ಮೋಸ ಮಾಡಿದ್ದಳು. ಇದು ಸುಳ್ಳು ಎಂದು ಹೇಳುವ ಅಥವಾ ರುಜುವಾತುಪಡಿಸುವ ಯಾವುದೇ ಸಾಕ್ಷಿ ಅವಳಲ್ಲಿಲ್ಲ. ಹಾಗಾಗಿ ಈ ವಿವಾಹಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದು ಅವರು ತಿಳಿಸಿದ್ದಾರೆ.

ಮರುಪರಿಶೀಲನೆಗೆ ಬಿಜೆಪಿ ಆಗ್ರಹ..
ಪಾಕಿಸ್ತಾನಿ ಪ್ರಜೆ ಕಳಂಕಿತ ಶೋಯಿಬ್ ಜತೆ ಮದುವೆ ಮಾಡಿಕೊಳ್ಳುವ ನಿರ್ಧಾರವನ್ನು ಸಾನಿಯಾ ಮಿರ್ಜಾ ಮರು ಪರಿಶೀಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಉಪಾಧ್ಯಕ್ಷ ಕಲ್‌ರಾಜ್ ಅವರು ಮಾತನಾಡುತ್ತಾ, ಸಾನಿಯಾ ಮಿರ್ಜಾ ಭಾರತದಲ್ಲಿ ಜನಪ್ರಿಯ ವ್ಯಕ್ತಿತ್ವದವರಾಗಿದ್ದು, ಅವರು ಶೋಯಿಬ್‌ರನ್ನು ಮದುವೆಯಾಗುವ ನಿರ್ಧಾರವನ್ನು ಮತ್ತೊಮ್ಮೆ ಯೋಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಶೋಯಿಬ್-ಸಾನಿಯಾ ಡೇ-ಔಟ್...
ಒಂದು ಕಡೆಯಿಂದ ಆಯೇಶಾ, ಮತ್ತೊಂದು ಕಡೆಯಿಂದ ಪಾಕಿಸ್ತಾನ ಮತ್ತು ಭಾರತದ ಮಾಧ್ಯಮಗಳಿಂದ ಕಿರಿಕಿರಿ ಅನುಭವಿಸುತ್ತಿರುವ ಭಾವಿ ಪತಿ-ಪತ್ನಿಯರಾದ ಶೋಯಿಬ್ ಮತ್ತು ಸಾನಿಯಾ ಸೋಮವಾರ ಹೈದರಾಬಾದ್‌ನಲ್ಲಿ ಸುತ್ತಾಡಿ ಐಸ್ ಕ್ರೀಂ ತಿಂದು ವಾಪಸಾಗಿದ್ದಾರೆ.

ತೀವ್ರ ಒತ್ತಡವನ್ನೆದುರಿಸುತ್ತಿರುವ ಜೋಡಿ, ಕುಟುಂಬದೊಂದಿಗೆ ಕಾರಿನಲ್ಲಿ ಹೊರಗೆ ಹೋಗಿದ್ದರು. ನಗರದ ಹಲವೆಡೆ ಸುತ್ತಾಡಿದ ಅವರು ಕ್ರೀಂ ಪಾರ್ಲರ್‌ಗೆ ಹೋಗಿ ಕೆಲ ಹೊತ್ತು ಕಳೆದ ನಂತರ ಮನೆಗೆ ಮರಳಿದರು ಎಂದು ವರದಿಗಳು ಹೇಳಿವೆ.

ಕುಟುಂಬ ನಿಯಂತ್ರಣ ಕಿಟ್ ಉಡುಗೊರೆ..
ಎಷ್ಟೇ ವಿವಾದಗಳಿದ್ದರೂ ಶೋಯಿಬ್ ಮತ್ತು ಸಾನಿಯಾ ಮದುವೆ ನಡೆಯುವುದು ಖಚಿತವಾಗುತ್ತಿದ್ದಂತೆ ಪಾಕಿಸ್ತಾನದ ಜನಸಂಖ್ಯಾ ಕಲ್ಯಾಣ ಸಚಿವ ಫಿರ್ದಾಸ್ ಆಶಿಕ್, ತಾನು ಅವರಿಬ್ಬರಿಗೆ ಕುಟುಂಬ ನಿಯಂತ್ರಣ ಯೋಜನೆ ಕಿಟ್ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ.

ನಾನು ಜನಸಂಖ್ಯಾ ಕಲ್ಯಾಣ ಸಚಿವಾಲಯವನ್ನು ಪ್ರತಿನಿಧಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ನನ್ನ ಪ್ರಮುಖ ಉದ್ದೇಶಗಳಲ್ಲಿ ಒಂದು. ಶೋಯಿಬ್ ಕುಟುಂಬಕ್ಕೆ ನಾನು ಜನಸಂಖ್ಯಾ ನಿಯಂತ್ರಣ ಕಿಟ್ ನೀಡುವುದಲ್ಲದೆ, ಸಚಿವಾಲಯದ ರಾಯಭಾರಿಗಳಾಗುವಂತೆ ದಂಪತಿಯನ್ನು ಕೇಳಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ