ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜತೆಗಿದ್ದ ಬಾಲಕಿಗೂ ಲೈಂಗಿಕ ಕಿರುಕುಳ ನೀಡಿದ್ದ ಊಟಿ ಪಾದ್ರಿ? (Catholic priest | sexual Abuse | Rev. Joseph Palanivel Jeyapaul | Most Rev. A. Almaraj)
Bookmark and Share Feedback Print
 
ಅಮೆರಿಕಾದಲ್ಲಿ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿರುವ ಊಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾದ್ರಿ, ಜತೆಗಿದ್ದ ಬಾಲಕಿಯನ್ನೂ ಕಾಡಿದ್ದರು ಎಂದು ಇದೀಗ ವ್ಯಾಟಿಕನ್ ಮೂಲಗಳು ಆರೋಪಿಸಿವೆ.

ಈ ನಡುವೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಂಬಂಧ ವಿಚಾರಣೆಗಾಗಿ ಅಮೆರಿಕಾಕ್ಕೆ ತೆರಳಲು ಸಿದ್ಧನಿದ್ದೇನೆ, ಆದರೆ ಬಿಷಪ್ ಅನುಮತಿ ನೀಡಬೇಕು ಎಂದು ಆರೋಪಿ ರೆವೆಡೆಂಟ್ ಜೋಸೆಫ್ ಪಳನಿವೇಲ್ ಜೆಯಾಪೌಲ್ ತಿಳಿಸಿದ್ದಾರೆ.

2004ರ ಸೆಪ್ಟೆಂಬರ್‌ನಿಂದ 2005ರ ಆಗಸ್ಟ್ ತಿಂಗಳ ನಡುವೆ ಅಮೆರಿಕದ ಮಿನಿಸೊಟಾ ರಾಜ್ಯದ ಕ್ರೂಕ್‌ಸ್ಟನ್‌ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 14 ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯ ಗೆಳತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವ್ಯಾಟಿಕನ್ ಆರೋಪಿಸುತ್ತಿದೆ.

ಈ ಬಗ್ಗೆ ಪಾದ್ರಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ; ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ. ಆ ಬಾಲಕಿಯರ ಪರಿಚಯವೇ ನನಗಿಲ್ಲ ಎಂದು ಆರೋಪಿ ರೆವೆಡೆಂಟ್ ಜೋಸೆಫ್ ಪಳನಿವೇಲ್ ಜೆಯಾಪೌಲ್ ತಿಳಿಸಿದ್ದಾರೆ.

ನನ್ನ ಧರ್ಮಗುರುಗಳು ಅನುಮತಿ ನೀಡಿದಲ್ಲಿ ಅಮೆರಿಕಾದ ವಿಚಾರಣೆಗಾಗಿ ನಾನು ಅಲ್ಲಿಗೆ ತೆರಳಲು ಸಿದ್ಧನಿದ್ದೇನೆ ಎಂದು ತನ್ನ ವಕೀಲರನ್ನು ಭೇಟಿ ಮಾಡಲು ಚೆನ್ನೈಗೆ ತೆರಳುತ್ತಿದ್ದ ಪಾದ್ರಿ ಹೇಳಿದ್ದಾರೆ.

ಮುಂದಿನ ಕ್ರಮಕ್ಕೆ ಶಿಫಾರಸು...
ಅಮೆರಿಕಾದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿರುವ ಪಾದ್ರಿ ಪ್ರಕರಣದ ಕುರಿತು ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಭಾರತೀಯ ಕ್ಯಾಥೊಲಿಕ್ ಬಿಷಪ್ ಕೌನ್ಸಿಲ್‌ಗೆ ಶಿಫಾರಸು ಮಾಡಲಾಗಿದೆ ಎಂದು ಉದಕಮಂಡಲ ಬಿಷಪ್ ಎ. ಅಮಲ್‌ರಾಜ್ ತಿಳಿಸಿದ್ದಾರೆ.

ಜೆಯಾಪೌಲ್ ಮೇಲೆ ಆರೋಪಗಳು ಈ ಹಿಂದೆಯೇ ಬಂದಿರುವುದು ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಂಡಿರುವ ಬಿಷಪ್, ಅದೇ ನಿಟ್ಟಿನಲ್ಲಿ ತನಿಖೆಯನ್ನೂ ನಡೆಸಲಾಗಿತ್ತು; ಆದರೆ ಅದರಲ್ಲಿ ಅವರು ತಪ್ಪಿತಸ್ಥರು ಎಂದು ಕಂಡು ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಮಾಧ್ಯಮಗಳ ಮೂಲಕ ಅದೇ ಆರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಷಪ್ ಆಡಳಿತವು ಈ ವಿಚಾರದ ಕುರಿತು ಹೆಚ್ಚುವರಿ ಮಾಹಿತಿಗಳನ್ನು ಅಧ್ಯಯನ ನಡೆಸಿತ್ತು ಎಂದರು.

ಮದ್ರಾಸ್ ಆರ್ಚ್ ಬಿಷಪ್ ಸೂಚನೆ..
ಆರೋಪಿ ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಉದಕಮಂಡಲ ಚರ್ಚ್ ಆಡಳಿತ ವ್ಯಾಪ್ತಿಯಲ್ಲಿ ಬರುವ ಊಟಿ ಬಿಷಪ್ ಅಮಲ್‌ರಾಜ್ ಅವರಿಗೆ ಮದ್ರಾಸ್ ಆರ್ಚ್ ಬಿಷಪ್ ರೆವೆಡೆಂಟ್ ಫಾದರ್ ಎಂ. ಚಿನ್ನಪ್ಪ ಸೂಚನೆ ನೀಡಿದ್ದಾರೆ.

ಅಲ್ಲದೆ ವ್ಯಾಟಿಕನ್ ಬಯಸಿದರೆ ಅಮೆರಿಕಾದಲ್ಲಿ ವಿಚಾರಣೆ ಎದುರಿಸಲು ಫಾದರ್ ಜೆಯಾಪೌಲ್ ಕಡ್ಡಾಯವಾಗಿ ಮರಳಬೇಕು. ಪ್ರಕರಣಕ್ಕೆ ಅಗತ್ಯವಿರುವ ಎಲ್ಲಾ ಸಹಕಾರಗಳನ್ನೂ ನೀಡಬೇಕು ಎಂದು ಚಿನ್ನಪ್ಪ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ