ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾರದ ಅಡ್ವಾಣಿ, ಸುಷ್ಮಾ; ಬಿಜೆಪಿ 30ನೇ ಹುಟ್ಟುಹಬ್ಬ ಬರೀ ಡಲ್ಲು! (BJP | Advani | Sushma Swaraj | Chidambaram)
Bookmark and Share Feedback Print
 
1980ರಲ್ಲಿ ಹುಟ್ಟಿಕೊಂಡಿದ್ದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮಂಗಳವಾರ 30ನೇ ಜನ್ಮದಿನದ ಸಂಭ್ರಮ. ಆದರೆ ಪಕ್ಷದ ವಾರ್ಷಿಕ ಸಭೆಯಲ್ಲಿ ಹಿರಿಯ ನೇತಾರ ಎಲ್.ಕೆ. ಅಡ್ವಾಣಿ ಮತ್ತು ಲೋಕಸಭಾ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅನುಪಸ್ಥಿತಿಯು ಕಾರ್ಯಕ್ರಮವನ್ನು ಕಳೆಗುಂದಿಸಿದೆ.

ನಗರದಲ್ಲೇ ಇದ್ದರೂ ಕೂಡಾ ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಸೋಮವಾರವಷ್ಟೇ ಉತ್ತರಾಂಚಲ ಪ್ರವಾಸದಿಂದ ಮರಳಿದ್ದ ಆಡ್ವಾಣಿ ಮನೆಯಲ್ಲಿಯೇ ಉಳಿದುಕೊಂಡರೆ, ಸುಷ್ಮಾ ಇನ್ನಿತರ ಬಿಡುವಿಲ್ಲದ ಚಟುವಟಿಕೆಯಲ್ಲಿ ಮಗ್ನರಾಗಿದ್ದರು. ಅದೇ ವೇಳೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಸಮಾರಂಭಕ್ಕೆ ತಡವಾಗಿ ಆಗಮಿಸಿದರು.

ಸಭೆಯಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ, ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರಕಾರವು ನಕ್ಸಲ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶದ ಮೂರನೇ ಒಂದು ಭಾಗದಷ್ಟು ಅಂದರೆ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಕ್ಸಲರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಮಾವೋ ಉಗ್ರರಿಂದಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಭೀತಿಯಲ್ಲಿದೆ. ಆದರೆ ಸರಕಾರವು ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಜೇಟ್ಲಿ ಕಿಡಿ ಕಾರಿದರು.

ಮಾತು ಮುಂದುವರಿಸಿದ ಅವರು ವೋಟ್‌ ಬ್ಯಾಂಕ್ ರಾಜಕೀಯ ಮಾಡದ ಭಾರತದ ಏಕಮಾತ್ರ ಪಕ್ಷ ಬಿಜೆಪಿಯಾಗಿದೆ ಎಂದು ಹೇಳಿದರು.

ಅದೇ ವೇಳೆ ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಹತ್ಯೆಗೀಡಾದ 76 ಮಂದಿ ಸಿಆರ್‌ಪಿಎಫ್ ಜವಾನರ ಆತ್ಮಕ್ಕೆ ಎರಡು ನಿಮಿಷದ ಮೌನದ ಮೂಲಕ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಯುಪಿಎ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ, ಉಗ್ರರ ವಿರುದ್ಧ ಕೇಂದ್ರ ಸರಕಾರ ಮೃದು ಧೋರಣೆ ತಳೆದಿರುವ ಪರಿಣಾಮ 76 ಸೈನಿಕರನ್ನು ಬಲಿ ತೆಗೆದುಕೊಂಡಿರುವ ದಂತೇವಾಡಾದಂತಹ ಘಟನೆ ನಡೆದಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ