ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿ ಎಂದು ಒಪ್ಪಿಕೊಂಡ ಶೋಯಿಬ್; ಆಯೇಶಾಗೆ ತಲಾಖ್ (Shoaib Malik | Islamic fatwa | Ayesha Siddiqui | Sania Mirza)
Bookmark and Share Feedback Print
 
PR
ಮೊದಲನೇ ಮದುವೆಯನ್ನು ಮುರಿದುಕೊಂಡ ಸಾನಿಯಾ ಮಿರ್ಜಾ ಕೊನೆಗೂ ಮಾಡಿಕೊಳ್ಳುತ್ತಿರುವುದು ವಿಚ್ಛೇದಿತ ಯುವಕನನ್ನು ಎಂಬುದು ಖಚಿತವಾಗಿದೆ. ಸಾನಿಯಾ ಭಾವೀ ಪತಿ ಮತ್ತು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ತಾನು ಆಯೇಶಾ ಸಿದ್ಧಿಕಿಯನ್ನು ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡು ವಿವಾಹ ವಿಚ್ಛೇದನ ದಾಖಲೆಗಳಿಗೆ ಸಹಿ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಇದರೊಂದಿಗೆ ಮುಕ್ತಾಯ ಕಾಣುವ ಲಕ್ಷಣಗಳೂ ಕಂಡು ಬಂದಿವೆ. ಆದರೆ ಶೋಯಿಬ್ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಚ್ಛೇದನ ನೀಡಿದ್ದಾರೆ, ಎಫ್‌ಐಆರ್ ವಾಪಸ್...
ಶೋಯಿಬ್ ಮಲಿಕ್ ಕುಟುಂಬ ಮತ್ತು ಆಯೇಶಾ ಕುಟುಂಬವು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿವೆ. ಶೋಯಿಬ್ ಅವರು ನಮ್ಮ ಪುತ್ರಿ ಆಯೇಶಾಳನ್ನು ಮಾಡಿಕೊಂಡಿದ್ದ ಮದುವೆಯನ್ನು ಅಧಿಕೃತವಾಗಿ ಮುರಿದಿದ್ದಾರೆ ಎಂದು ಆಯೇಶಾ ಕುಟುಂಬ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದೆ.

ಶೋಯಿಬ್ ವಿಚ್ಛೇದನ ನೀಡಿರುವ ಹಿನ್ನೆಲೆಯಲ್ಲಿ ನಾವು ಅವರ ಮೇಲೆ ಹಾಕಿರುವ ಎಫ್ಐಆರ್ ಅನ್ನು ವಾಪಸ್ ಪಡೆದುಕೊಳ್ಳುತ್ತೇವೆ. ನಮ್ಮ ಮಗಳಿಗೆ ವಿಚ್ಛೇದನ ನೀಡಿರುವುದರಿಂದ ಸಂತೋಷವಾಗಿದೆ. ನಿಜವಾಗಿ ಇದೊಂದು ಸಂತೋಷದ ವಿಚಾರವಲ್ಲ. ಆದರೆ ನಮ್ಮ ಬೇಡಿಕೆ ಈಡೇರಿದೆ. ಶೋಯಿಬ್ ನಮ್ಮ ಮಗಳನ್ನು ಮದುವೆಯಾಗಿರುವುದನ್ನು ಒಪ್ಪಿಕೊಂಡು ವಿಚ್ಛೇದನ ನೀಡಿರುವುದರಿಂದ ನಾವು ನಿಟ್ಟುಸಿರು ಬಿಟ್ಟಿದ್ದೇವೆ ಎಂದು ಆಯೇಶಾ ತಾಯಿ ತಿಳಿಸಿದ್ದಾರೆ.
PTI


ಹಿರಿಯರ ಸಲಹೆಯಂತೆ ನಾವು ಈ ಬೆಳವಣಿಗೆಗಳಿಗೆ ಮುಕ್ತಾಯ ಹಾಡಲು ನಿರ್ಧರಿಸಿದ್ದೇವೆ. ಸಾನಿಯಾ ಮತ್ತು ಶೋಯಿಬ್ ಮದುವೆಗೆ ಇನ್ನು ನಮ್ಮಿಂದ ಯಾವುದೇ ಅಡ್ಡಿಯಿಲ್ಲ. ಅವರ ಮದುವೆಗೆ ನಾವು ಶುಭ ಹಾರೈಸುತ್ತಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.

ಶೋಯಿಬ್ ಸುಳ್ಳುಗಾರ, ವಂಚಕ..
ಹೀಗೆಂದು ಆರೋಪಿಸಿರುವುದು ಆಯೇಶಾ ವಕೀಲ ಫಾರೂಕ್ ಹಸನ್. ಶೋಯಿಬ್ ಅವರು ಆಯೇಶಾಳನ್ನು ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದು, ವಿಚ್ಛೇದನ ಪತ್ರಗಳಿಗೆ ಸಹಿ ಹಾಕಿದ್ದಾರೆ. ಅವರು ಇದುವರೆಗೆ ಸುಳ್ಳು ಹೇಳುತ್ತಾ ಬಂದಿದ್ದರು. ಮೋಸ ಮಾಡಲು ಯತ್ನಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಶೋಯಿಬ್ ಅವರ ಬಾವ ಇಮ್ರಾನ್ ಜಾಫರ್ ಭಾರತಕ್ಕೆ ನಿನ್ನೆ ಆಗಮಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ. ಇಮ್ರಾನ್ ಅವರು ಆಯೇಶಾ ಕುಟುಂಬದ ಜತೆ ನಿರಂತರ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಖಾಲಿದ್ ರಸೂದ್ ಖಾನ್ ಮತ್ತು ಇತರ ಐವರು ಕುಟುಂಬದ ಗೆಳೆಯರು ಎರಡೂ ಕುಟುಂಬಗಳ ನಡುವೆ ಸಂಧಾನ ನಡೆಸಿದ್ದರು. ನಿನ್ನೆ ರಾತ್ರಿಯೇ ಈ ನಿರ್ಧಾರಕ್ಕೆ ಬರಲಾಗಿತ್ತು. ಇಂದು ಸಹಿ ಹಾಕಿದ ನಂತರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ