ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರು ವಿದೇಶಗಳಿಂದ ಶಸ್ತ್ರಾಸ್ತ್ರ ಪಡೆಯುತ್ತಿದ್ದಾರೆ: ಚಿದಂಬರಂ (Maoists | weapons | Chhattisgarh | P Chidambaram)
Bookmark and Share Feedback Print
 
ಮಾವೋವಾದಿ ಗೆರಿಲ್ಲಾಗಳು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾರೆ ಎಂದು ಎಡಪಂಥೀಯ ಬಂಡುಕೋರರಿಂದ ಛತ್ತೀಸ್‌ಗಢದಲ್ಲಿ 76 ಭದ್ರತಾ ಸಿಬ್ಬಂದಿಗಳ ಮಾರಣಹೋಮ ನಡೆದ ಎರಡು ದಿನಗಳ ಬಳಿಕ ಗೃಹ ಸಚಿವ ಪಿ. ಚಿದಂಬಂರ ಹೇಳಿಕೆ ನೀಡಿದ್ದಾರೆ.

ಗಡಿ ಪ್ರದೇಶದಾದ್ಯಂತ ಇಂತಹ ಸಾಕಷ್ಟು ಮಾರುಕಟ್ಟೆಗಳಿವೆ. ಯಾವತ್ತು ಬೇಕಾದರೂ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ತರಬಹುದಾಗಿದೆ. ಅಲ್ಲಿಂದಲೇ ಈಶಾನ್ಯ ಪ್ರದೇಶದ ಬಂಡುಕೋರರು ಶಸ್ತ್ರಾಸ್ತ್ರಗಳನ್ನು ಪಡೆಯುತ್ತಾರೆ ಎಂದು ಚಿದಂಬರಂ ಹೇಳಿದರು.

ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದಾದ ಹಲವು ಸ್ಥಳಗಳು ಗಡಿಯಾಚೆಗೆ ಇವೆ. ಇದನ್ನು ನೀವು ಗೂಗಲ್‌ನಲ್ಲೂ ಹುಡುಕಬಹುದು. ನಿಮ್ಮಲ್ಲಿ ಅಂತಹ ಅಸ್ತ್ರಗಳು ಇಲ್ಲದೇ ಇದ್ದರೆ ನೀವು ಅಲ್ಲಿಗೆ ಹೋಗಬಹುದು ಎಂದರು.

ಭಾರತವು ನೇಪಾಳ, ಬಾಂಗ್ಲಾದೇಶ ಮತ್ತು ಮಯನ್ಮಾರ್‌ಗಳ ಜತೆ ಗಡಿಭಾಗವನ್ನು ಮುಕ್ತಗೊಳಿಸಿದ್ದು, ಬಂಡುಕೋರರು ಕಳ್ಳತನದಿಂದ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ತರುತ್ತಾರೆ ಎಂದು ವಿವರಣೆ ನೀಡಿದರು.

ಮಂಗಳವಾರ ಭದ್ರತಾ ಪಡೆಗಳ ಮೇಲಿನ ಹೇಯ ದಾಳಿಯ ಹಿಂದೆ ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸರಕಾರ ತನಿಖೆ ನಡೆಸಲಿದೆ. ನಾವು ಎಲ್ಲಿ ಪ್ರಮಾದ ಎಸಗಿದ್ದೇವೆ ಎಂಬುದನ್ನು ಗುರುತಿಸಲು ನಾವು ಪೂರ್ಣ ಪ್ರಮಾಣದ ತನಿಖೆಯನ್ನು ಕೈಗೊಳ್ಳಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಮಾವೋವಾದಿಗಳಿಂದ ನರಮೇಧ ನಡೆದ ದಂತೇವಾಡ ಪ್ರಾಂತ್ಯದ ಚಿಂತಾಲ್ನಾರ್ ಹಿಲ್ಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದು ರಾಜ್ಯ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆಗಳ ಜಂಟಿ ನಿರ್ಧಾರವಾಗಿತ್ತು ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ನಕ್ಸಲರು ಚೀನಾ, ಮಯನ್ಮಾರ್ ಮತ್ತು ಬಾಂಗ್ಲಾದೇಶಗಳಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾರೆ ಎಂದು ಕಳೆದ ವರ್ಷ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿದ್ದನ್ನು ಇದೀಗ ಸ್ಮರಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ