ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಜೆಗೆ ನಕಾರ: ಕಳಂಕಿತ ನ್ಯಾಯಾಧೀಶ ದಿನಕರನ್ ಸಿಕ್ಕಿಂಗೆ ವರ್ಗ (P D Dinakaran | Chief Justice | Karnataka | Sikkim | Land Grabbing | SC collegium)
Bookmark and Share Feedback Print
 
ಜಮೀನು ಕಬಳಿಕೆಯ ಕಳಂಕ ಹೊತ್ತಿರುವ ಕರ್ನಾಟಕ ಮುಖ್ಯ ನ್ಯಾಯಮೂರ್ತಿ, ತಮಿಳುನಾಡಿನ ನ್ಯಾಯಾಧೀಶ ಪಿ.ಡಿ.ದಿನಕರನ್ ಅವರು ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಗೊಳ್ಳಲಿದ್ದಾರೆ.

ಭೂಕಬಳಿಕೆ ಆರೋಪಗಳಿಂದ ಕಳಂಕಿತರಾಗಿರುವ ದಿನಕರನ್ ಅವರು ವಿವಾದಕ್ಕೆ ತುತ್ತಾಗಿರುವಂತೆಯೇ ಸುಪ್ರೀಂ ಕೋರ್ಟಿನ ವಿಶೇಷ ಸಮಿತಿಯು ಅವರಿಗೆ ರಜೆಯಲ್ಲಿ ತೆರಳಲು ಸಲಹೆ ನೀಡಿತ್ತು. ಆದರೂ ಅವರು ಕರ್ನಾಟಕ ಹೈಕೋರ್ಟ್ ಕಲಾಪ ನಿರ್ವಹಿಸುತ್ತಿದ್ದರೆಂದು ವರದಿಯಾಗಿತ್ತು ಮತ್ತು ನವದೆಹಲಿಯ ನ್ಯಾಯಮೂರ್ತಿ ಮದನ್ ಲೋಕೂರ್ ಅವರನ್ನು ಕರ್ನಾಟಕ ಮುಖ್ಯ ನ್ಯಾಯಮೂರ್ತಿಯನ್ನಾಗಿ ಹಂಗಾಮಿ ನೇಮಕ ಮಾಡಲಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಎಸ್.ಎಚ್.ಕಪಾಡಿಯಾ, ಅಲ್ತಮಸ್ ಕಬೀರ್, ಆರ್.ವಿ.ರವೀಂದ್ರನ್ ಮತ್ತು ದಲವೀರ್ ಭಂಡಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ವಿಶೇಷ ಸಮಿತಿಯು ಇದೀಗ ದಿನಕರನ್ ವರ್ಗಾವಣೆಗೆ ನಿರ್ಣಯ ಕೈಗೊಂಡಿದೆ. ರಜೆಯಲ್ಲಿ ತೆರಳಲು ಸಲಹೆ ನೀಡಿದ ಬಳಿಕವೂ ದಿನಕರನ್ ಈ ಸೂಚನೆ ತಿರಸ್ಕರಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಉನ್ನತ ಮೂಲಗಳ ಪ್ರಕಾರ, ರಜೆಯಲ್ಲಿ ಕಳುಹಿಸುವ ನಿರ್ಧಾರ ಬದಲಿಸಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿಯು, ಸಿಕ್ಕಿಂಗೆ ವರ್ಗಾಯಿಸುವ ನಿರ್ಣಯ ಕೈಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ