ಮೂರು ದಿನಗಳ ಹಿಂದೆ ಛತ್ತೀಸ್‌ಗಡ ದಾಂತೇವಾಡಾ ಜಿಲ್ಲೆಯಲ್ಲಿ ಮಾವೋವಾದಿ ಉಗ್ರರ ದಾಳಿಯಿಂದ 76 ಸಿಆರ್‌ಪಿಎಫ್ ಜವಾನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ತನಿಖೆಗಾಗಿ ಕೇಂದ್ರ ಸರಕಾರವು ತನಿಖಾ ಅಧಿಕಾರಿಯನ್ನು ನೇಮಿಸಿದೆ.
ಘಟನೆಯ ಕುರಿತು ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಬಿಎಸ್‌ಎಫ್‌ನ ಮಾಜಿ ಮಹಾನಿರ್ದೇಶಕ ಇ.ಎನ್.ರಾಮ್‌ಮೋಹನ್‌ರಲ್ಲಿ ಕೇಳಿಕೊಳ್ಳಲಾಗಿದೆ.
ಮಂಗಳವಾರ ನಕ್ಸಲರ ಅಟ್ಟಹಾಸಕ್ಕೆ 76 ಸಿಆರ್‌ಪಿಎಫ್ ಜವಾನರು ಬಲಿಯಾಗಿದ್ದರು. ಆ ಮೂಲಕ ನಕ್ಸಲರ ವಿರುದ್ಧದ ಕೇಂದ್ರ ಸರಕಾರದ 'ಗ್ರೀನ್ ಹಂಟ್' ಕಾರ್ಯಾಚರಣೆಗೆ ಹಿನ್ನಡೆಯುಂಟಾಗಿತ್ತು.