ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಳೆದುಕೊಂಡ ಕನ್ಯತ್ವ ಪಡೆಯಲು ಯುವತಿಯರು ಕ್ಯೂ ನಿಲ್ತಿದ್ದಾರೆ!
(restore virginity | virgin bride | hymen reconstruction | cosmetic surgery)
ಕಳೆದುಕೊಂಡ ಕನ್ಯತ್ವ ಪಡೆಯಲು ಯುವತಿಯರು ಕ್ಯೂ ನಿಲ್ತಿದ್ದಾರೆ!
ನವದೆಹಲಿ, ಶುಕ್ರವಾರ, 9 ಏಪ್ರಿಲ್ 2010( 10:32 IST )
ತನ್ನ ಗಂಡನಾಗುವವ ಯಾರೂ ಮುಟ್ಟಿರದ ಪರಿಶುದ್ಧ ಪತ್ನಿಯನ್ನೇ ಬಯಸುತ್ತಾನೆ ಎಂಬ ಕಲ್ಪನೆ ಭಾರತೀಯ ಯುವತಿಯರಲ್ಲಿ ದಿನೇದಿನೇ ಹೆಚ್ಚುತ್ತಿದೆ. ಇದೇ ಕಾರಣದಿಂದಾಗಿ ಕಳೆದುಕೊಂಡಿರುವ ಕನ್ಯತ್ವವನ್ನು ಮತ್ತೆ ಪಡೆದುಕೊಳ್ಳಲು ಸರ್ಜರಿಗಳಿಗೆ ಮುಂದಾಗುತ್ತಿರುವವರ ಸಂಖ್ಯೆಯಲ್ಲೂ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿದೆ.
ಇತ್ತೀಚೆಗಷ್ಟೇ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ಕನ್ಯಾಪೊರೆಯನ್ನು ಮರುನಿರ್ಮಿಸಿಕೊಂಡಿರುವ 25ರ ಹರೆಯದ ಯುವತಿಯ ಮಾತನ್ನೇ ಕೇಳುವುದಾದರೆ, 'ಕನ್ಯತ್ವದ ಬಗ್ಗೆ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ನಾನು ಕನ್ಯೆಯಾಗಿ ಉಳಿದಿಲ್ಲ ಎಂಬ ವಿಚಾರವನ್ನು ಹೆತ್ತವರಲ್ಲಿ ಕೂಡ ಹೇಳಿಕೊಂಡಿಲ್ಲ. ಇದೀಗ ಅವರು ನನ್ನ ಮದುವೆಯನ್ನು ಆಯೋಜಿಸುತ್ತಿದ್ದಾರೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ನಿರ್ಧರಿಸಿದೆ' ಎನ್ನುತ್ತಾಳೆ.
WD
ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33ರ ಮೀಸಲಾತಿ ನೀಡಬೇಕೆಂಬ ಐತಿಹಾಸಿಕ ಮಸೂದೆಯೊಂದು ಸಿದ್ಧಗೊಳ್ಳುತ್ತಿರುವ ಹೊತ್ತಿನಲ್ಲೂ ಮೇಲಿನ ಉದಾಹರಣೆಯಂತೆ ಕಳೆದುಕೊಂಡ ಕನ್ಯತ್ವವನ್ನು ಸಂಪ್ರದಾಯಕ್ಕೆ ಹೆದರಿ ಮರುನಿರ್ಮಿಸಿಕೊಳ್ಳುವ ಅನಿವಾರ್ಯತೆಗೆ ಯುವತಿಯರು ಬೀಳುತ್ತಿದ್ದಾರೆ.
ಯೋನಿ ಪೊರೆ ಸರಿಪಡಿಸುವುದು ಅಥವಾ ಕನ್ಯಾಪೊರೆಯ ಮರು ನಿರ್ಮಾಣಕ್ಕೆ ಕಾಸ್ಮೆಟಿಕ್ ಸರ್ಜರಿ ನಡೆಸಿ ಕನ್ಯತ್ವವನ್ನು ಮರುಕಳಿಸಲಾಗುತ್ತದೆ. ಹರಿದ ಕನ್ಯಾಪೊರೆಯನ್ನು ಮರು ನಿರ್ಮಿಸುವ ತೀರಾ ಸರಳ ವಿಧಾನವಿದು.
ಅಪೋಲೋ ಹಾಸ್ಪಿಟಲ್‌ನಲ್ಲಿನ ಕಾಸ್ಮೆಕಾಲಜಿಸ್ಟ್ ಅನೂಪ್ ಧೀರ್ ಅವರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಕನ್ಯತ್ವ ದುರಸ್ತಿ ಶಸ್ತ್ರಚಿಕಿತ್ಸೆ ಬೇಡಿಕೆ ಹೆಚ್ಚುತ್ತಿದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿ ವರ್ಷ ಸರಿಸುಮಾರು ಶೇ.20ರಿಂದ 30ರಷ್ಟು ಹೆಚ್ಚಳ ಕಂಡು ಬರುತ್ತಿದೆ. ಇದನ್ನು ಮಾಡಿಸಿಕೊಳ್ಳಲು ಇಲ್ಲಿಗೆ ಬರುವವರಲ್ಲಿ 20ರಿಂದ 30ರೊಳಗಿನ ಯುವತಿಯರೇ ಹೆಚ್ಚು ಎಂದು ಧೀರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕನ್ಯಾಪೊರೆ ದಕ್ಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬುದನ್ನು ಏಷ್ಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಅನಿತಾ ಕಾಂತ್ ಕೂಡ ಒಪ್ಪಿಕೊಳ್ಳುತ್ತಾರೆ.
ವೈವಾಹಿಕ ಜೀವನದ ಶುಭಾರಂಭಕ್ಕೆ ಕನ್ಯತ್ವ ಮರು ನಿರ್ಮಾಣ ಅಗತ್ಯ ಎಂಬ ಭಾವನೆ ನಮ್ಮ ಮಡಿವಂತಿಕೆಯ ಸಮಾಜದಲ್ಲಿರುವ ಬಹುತೇಕ ಮಹಿಳೆಯರದ್ದು. ತಮ್ಮ ಸಂಗಾತಿ ಎಷ್ಟು ಆಧುನಿಕರಾಗಿರುತ್ತಾರೆ ಎಂಬ ಬಗ್ಗೆಯೂ ಅವರು ಯೋಚನೆ ಮಾಡುವುದಿಲ್ಲ. ಇದೊಂದು ವಿಚಾರದಲ್ಲಿ ಪುರುಷರು ತೀರಾ ಸಾಂಪ್ರದಾಯಿಕ ಮನೋಭಾವಕ್ಕೆ ಶರಣಾಗುತ್ತಾರೆ. ಇದೇ ಕಾರಣದಿಂದ ಮದುವೆಗಿಂತ ಮೊದಲು ಕನ್ಯೆಯಾಗಿರಬೇಕೆಂದು ಬಯಸುತ್ತಾರೆ ಎಂದು ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಅದೇ ಹೊತ್ತಿಗೆ ಕನ್ಯಾಪೊರೆ ಹರಿಯಲು ಕೇವಲ ವಿವಾಹಪೂರ್ವ ಲೈಂಗಿಕತೆ ಮಾತ್ರ ಕಾರಣವಲ್ಲ. ಆದರೆ ಅದೂ ಒಂದು ಕಾರಣ ಹೌದು.
ನಮ್ಮಲ್ಲಿ ಸರ್ಜರಿಗೆ ಬರುವ ಬಹುತೇಕ ಮಹಿಳೆಯರು ನೀಡುವ ಕಾರಣ ಅವರ ವಿವಾಹಪೂರ್ವ ಲೈಂಗಿಕತೆ. ಆದರೆ ಕನ್ಯಾಪೊರೆ ಧಕ್ಕೆಯಾಗಲು ಕೇವಲ ಸೆಕ್ಸ್ ಮಾತ್ರ ಕಾರಣವಲ್ಲ. ಕ್ರೀಡಾ ಚಟುವಟಿಕೆಗಳು, ಕಠಿಣ ವ್ಯಾಯಾಮ ಮತ್ತು ಡ್ಯಾನ್ಸ್‌ಗಳಿಂದಾಗಿಯೂ ಹೀಗಾಗಬಹುದು ಎಂದು ಮ್ಯಾಕ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಹಿರಿಯ ಪ್ಲಾಸ್ಟಿಕ್ ಸರ್ಜನ್ ಬಿರಾಜ್ ನಥಾನಿ ಹೇಳುತ್ತಾರೆ.
ಕೇವಲ ಒಂದು ಗಂಟೆಯಲ್ಲಷ್ಟೇ ಮುಗಿಯು ಈ ಶಸ್ತ್ರಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳು 15,000 ರೂ.ಗಳಿಂದ 20,000 ರೂ.ಗಳವರೆಗೆ ಶುಲ್ಕ ವಿಧಿಸುತ್ತವೆ. ಖಾಸಗಿ ಆಸ್ಪತ್ರೆಗಳು 50,000ದಿಂದ 70,000 ರೂಪಾಯಿಗಳನ್ನು ವಸೂಲಿ ಮಾಡುತ್ತಿವೆ.