ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » '61 ಪಾಕಿಸ್ತಾನಿ ಹಿಂದೂಗಳು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ'
(Pak-Hindu nationals | Amravati | Maharashtra | RR Patil)
'61 ಪಾಕಿಸ್ತಾನಿ ಹಿಂದೂಗಳು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ'
ಮುಂಬೈ, ಶುಕ್ರವಾರ, 9 ಏಪ್ರಿಲ್ 2010( 18:41 IST )
ಪಾಕಿಸ್ತಾನದ 61 ಹಿಂದೂ ಪ್ರಜೆಗಳು ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಗೆ ಮಾಹಿತಿ ನೀಡಲಾಗಿದೆ.
ಸಿಂಧಿ ಸಮುದಾಯಕ್ಕೆ ಸೇರಿದ 61 ಪಾಕಿಸ್ತಾನೀಯರು ತಮ್ಮ ಪಾಸ್‌ಪೋರ್ಟ್‌ಗಳು ಮತ್ತು ವಿಸಾಗಳ ಅವಧಿ ಮುಗಿದು ಹೋಗಿದ್ದರೂ ಇನ್ನೂ ದೇಶದಲ್ಲೇ ಉಳಿದುಕೊಂಡಿದ್ದಾರೆ ಎಂದು ಗೃಹ ಸಚಿವ ಆರ್.ಆರ್. ಪಾಟೀಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಅವರು ತಮ್ಮ ಪಾಸ್‌ಪೋರ್ಟ್‌ಗಳನ್ನು ನವೀಕರಿಸಲು ಯತ್ನಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟವರು ಅವರ ಮನವಿಗಳನ್ನು ಪುರಸ್ಕರಿಸುತ್ತಿಲ್ಲ. ಹಾಗಾಗಿ ಅವರಿಗೆ ವಿಸಾ ವಿಸ್ತರಿಸಲು ನಮಗೆ ಸಮಸ್ಯೆ ಎದುರಾಗುತ್ತಿದೆ ಎಂದು ಪಾಟೀಲ್ ವಿವರಣೆ ನೀಡಿದ್ದಾರೆ.
ಇದು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಷ್ಟೇ ನಮ್ಮ ಗಮನಕ್ಕೆ ಬಂದಿತ್ತು ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮುಂತಾದ ನೆರೆ ದೇಶಗಳಿಂದ ಭಯೋತ್ಪಾದನೆಯನ್ನು ಹೊರತುಪಡಿಸಿ ಬಡತನದ ಕಾರಣದಿಂದಾಗಿಯೂ ಹಲವರು ವಲಸೆ ಬರುತ್ತಿದ್ದು, ಅದನ್ನು ಹೊರತುಪಡಿಸಿ ಅಧಿಕೃತವಾಗಿ ಭಾರತಕ್ಕೆ ಬಂದವರಲ್ಲಿ ಅಮರಾವತಿಯಲ್ಲಿ ಬಾಕಿ ಉಳಿದುಕೊಂಡವರ ಅಂಕಿ-ಅಂಶವನ್ನಷ್ಟೇ ಮಹಾರಾಷ್ಟ್ರ ರಾಜ್ಯ ಸರಕಾರ ಒದಗಿಸಿದೆ.