ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಹೆಣ್ಮಗು; ನೊಂದ ತಾಯಿಯಿಂದ ಮೂವರು ಮಕ್ಕಳ ಹತ್ಯೆ (Gauribai | Mahoba district | Mother kills daughters | Uttar Pradesh)
Bookmark and Share Feedback Print
 
ಎಲ್ಲಾ ಅಪರಾಧಗಳು ಉತ್ತರ ಪ್ರದೇಶದಲ್ಲೇ ಸಂಭವಿಸುತ್ತವೋ ಎಂಬಂತೆ ಮತ್ತೊಂದು ಸುದ್ದಿ ಬಂದಿದೆ. ಸತತ ಮೂರು ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕಾಗಿ ಗಂಡನ ಮನೆಯವರಿಂದ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ಅನುಭವಿಸಿದ ಮಾತೆಯೊಬ್ಬಳು ತನ್ನ ಮೂವರೂ ಮಕ್ಕಳನ್ನು ಬಾವಿಗೆ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆಕೆಯ ದುರದೃಷ್ಟವೆಂದರೆ ಮಕ್ಕಳು ಸಾವನ್ನಪ್ಪಿರುವುದು ಮತ್ತು ಸ್ವತಃ ಆಕೆ ಸಾಯದೇ ಇರುವುದು. ಬಾವಿಯಲ್ಲಿ ಮೇಲೆ ಕೆಳಗೆ ಹೋಗುತ್ತಿರುವುದನ್ನು ನೋಡಿದ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಮಕ್ಕಳು ಆಗಲೇ ಸತ್ತು ಹೋಗಿದ್ದವು.

ಇದು ನಡೆದಿರುವುದು ಲಕ್ನೋದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ. ಇಲ್ಲಿನ ರಾಗೊಲಿಯಾಖುರ್ದ್ ಗ್ರಾಮದ 35ರ ಹರೆಯದ ಗೌರಿ ಬಾಯ್ ಎಂಬಾಕೆಯೇ ಮನೆಯವರಿಂದಲೇ ಕಿರುಕುಳ ಅನುಭವಿಸಿದವಳು.

ಪೊಲೀಸರ ಪ್ರಕಾರ ಕಳೆದ ಎರಡು ತಿಂಗಳ ಹಿಂದೆ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಗೌರಿ ತೀರಾ ಖಿನ್ನಳಾಗಿದ್ದಳು. ಸತತ ಹುಡುಗಿಯರಿಗೇ ಜನ್ಮ ನೀಡುತ್ತಿರುವುದಕ್ಕೆ ಆಕೆಯನ್ನು ಗಂಡನ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಇದೇ ಕಾರಣದಿಂದ ಮಹಿಳೆ ತನ್ನ ಮೂವರು ಹೆಣ್ಮಕ್ಕಳನ್ನು ಕೊಂದು ಹಾಕಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಪಿ. ತಿವಾರಿ ತಿಳಿಸಿದ್ದಾರೆ.

ಎರಡು ತಿಂಗಳಿನಿಂದ ಐದು ವರ್ಷದೊಳಗಿನ ತನ್ನ ಮೂವರು ಮಕ್ಕಳನ್ನು ಬಾವಿಗೆ ಎಸೆದ ನಂತರ ಗೌರಿ ಕೂಡ ಬಾವಿಗೆ ಹಾರಿದ್ದಳು.

ಮೂವರೂ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಮಹಿಳೆಯನ್ನು ಗ್ರಾಮಸ್ಥರು ಹೇಗೋ ರಕ್ಷಿಸಿದ್ದಾರೆ. ಆಕೆಯನ್ನೀಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಮಾಹಿತಿ ನೀಡಿರುವ ಪೊಲೀಸರು, ಗಂಡನ ಮನೆಯವರ ಹಲವು ಸಂಬಂಧಿಕರನ್ನು ವಶಕ್ಕೆ ತೆಗುದಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ