ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜರ್ಮನ್ ನಿಯೋಗದಿಂದ ಅವಮಾನ; ಕ್ಷಮೆಗೆ ಮೋದಿ ಆಗ್ರಹ (apology from German MPs | Gujarat | Narendra Modi | German parliamentary delegation)
Bookmark and Share Feedback Print
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತನಾದ ರಾಜ್ಯದ ಮುಖ್ಯಮಂತ್ರಿಯ ಘನತೆಯನ್ನು ಮಣ್ಣುಪಾಲು ಮಾಡಲು ಯತ್ನಿಸಿರುವ ಪ್ರವಾಸಿ ಜರ್ಮನ್ ಸಂಸದೀಯ ನಿಯೋಗವು ಕ್ಷಮೆಯಾಚಿಸಬೇಕು ಎಂದು ಅಗ್ರಹಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿದೆ ಪತ್ರ ಬರೆದಿದ್ದಾರೆ.

ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ರಾಜ್ಯಕ್ಕೆ ಭೇಟಿ ನೀಡಿದ್ದ ಜರ್ಮನ್ ಸಂಸದೀಯ ನಿಯೋಗವು ಮೋದಿಯವರಿಗೆ ವಿಸಾ ನೀಡದೇ ಇರುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ ಎಂದು ವರದಿಗಳು ಹೇಳಿದ್ದವು.

ಗುಜರಾತ್ ಮುಖ್ಯಮಂತ್ರಿಯವರು ತನ್ನ ರಾಜಕೀಯದಲ್ಲಿ ಮೂಲಭೂತವಾದಿ ತತ್ವಗಳು ಕಾಣುತ್ತಿದ್ದು, ಅವರೊಬ್ಬ ಸರ್ವಾಧಿಕಾರಿ ಧೋರಣೆಯವರು. ಧಾರ್ಮಿಕ ಸ್ವಾತಂತ್ರ್ಯದಲ್ಲಿರುವ ಅವರ ದೃಷ್ಟಿಕೋನವೇ ಸರಿಯಿಲ್ಲ ಎಂದು ಜರ್ಮನಿಯ ಮೈತ್ರಿಕೂಟ ಸರಕಾರದ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ತನ್ನ ಗುಜರಾತ್ ಭೇಟಿಯ ನಂತರ ನಿನ್ನೆಯಷ್ಟೇ ಮಾಧ್ಯಮಗಳಿಗೆ ತಿಳಿಸಿತ್ತು.

ಭಾರತದಲ್ಲಿನ ಜರ್ಮನ್ ರಾಯಭಾರಿಯನ್ನು ಕರೆಸಿ ಈ ವಿಚಾರವನ್ನು ಚರ್ಚಿಸಬೇಕೆಂದು ಪ್ರಧಾನಿಯವರಲ್ಲಿ ಕೇಳಿಕೊಂಡಿರುವ ಮೋದಿ, ಇಂತಹ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಯಾಚಿಸುವಂತೆ ನಿರ್ದೇಶನ ನೀಡಲು ಸೂಚಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚೆಗಷ್ಟೇ ಗುಜರಾತ್‌ಗೆ ಭೇಟಿ ನೀಡಿದ್ದ ಜರ್ಮನ್ ಸಂಸದೀಯ ನಿಯೋಗವೊಂದು ಗುಜರಾತ್ ಮುಖ್ಯಮಂತ್ರಿ ಮತ್ತು ಭಾರತದ ಘನತೆಯನ್ನು ಹಾಳುಗೆಡಹುವ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಸಂಬಂಧ ನಿಯೋಗವು ಕ್ಷಮೆ ಯಾಚಿಸಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ರಾಜ್ಯ ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾಧ್ಯಮಗಳಿಗಿರುವ ಮುಕ್ತ ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಯವರು ಬೆಂಬಲಿಸುತ್ತಾರೆ. ಆದರೆ ದೇಶದ ಯಾವುದೇ ಚುನಾಯಿತ ಸರಕಾರದ ಮುಖ್ಯಸ್ಥರ ಗೌರವವನ್ನು ವಿದೇಶಿ ಸರಕಾರದ ಸಾರ್ವಜನಿಕ ಅಧಿಕಾರಿಗಳು ಹಾಳು ಮಾಡಲು ಇಲ್ಲಿ ಅವಕಾಶವಿಲ್ಲ ಎಂದು ಗುಜರಾತ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ