ಅಪಘಾತಕ್ಕೆ 13 ಬಲಿ
ಆಂಧ್ರಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ಅಫಘಾತಗಳಲ್ಲಿ ಶುಕ್ರವಾರ 13 ಮಂದಿ ಸಾವನ್ನಪ್ಪಿದ್ದಾರೆ. ನಲ್ಗೊಂಡಾ ಜಿಲ್ಲೆಯಲ್ಲಿ ರಿಕ್ಷಾ-ಲಾರಿ ಡಿಕ್ಕಿಯಾಗಿ ಐವರು ಹಾಗೂ ಖಮ್ಮಂ ಜಿಲ್ಲೆಯಲ್ಲಿ ವ್ಯಾನ್-ರಿಕ್ಷಾ ಅಫಘಾತಕ್ಕೆ ಐದು ಹಾಗೂ ನೆಲ್ಲೂರು ಜಿಲ್ಲೆಯಲ್ಲಿ ಕಾರು-ಬಸ್ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.