ಪೋಲೆಂಡ್ ದೇಶದ ಅಧ್ಯಕ್ಷ ಕ್ಯಾಚ್‌ಜಿನ್‌ಸ್ಕಿ ವಿಮಾನ ಅಪಘಾತದಲ್ಲಿ ನಿಧನಹೊಂದಿರುವುದರಿಂದ ಭಾರತ ಒಬ್ಬ ಶ್ರೇಷ್ಠ ಗೆಳೆಯನನ್ನು ಕಳೆದುಕೊಂಡಂತಾಗಿದೆ ಎಂದು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಶೋಕ ಸಂದೇಶ ರವಾನಿಸಿದ್ದಾರೆ.
ಪೋಲೆಂಡ್‌ನ ಸಂಸತ್ತಿಗೆ ಬರೆದ ಪತ್ರದಲ್ಲಿ ಉಭಯ ದೇಶಗಳ ಸಂಬಂಧ ವೃದ್ಧಿಗೆ ಶ್ರಮಿಸಿದ ಅಧ್ಯಕ್ಷ ಕ್ಯಾಚ್‌ಜಿನ್‌ಸ್ಕಿ ಹಾಗೂ ಅವರ ಪತ್ನಿ ನಿಧನವಾಗಿರುವುದು ಆಘಾತ ತಂದಿದೆ ಎಂದು ಪಾಟೀಲ್ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ನಾನು ಪೋಲೆಂಡ್‌ಗೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡ ಪಾಟೀಲ್,ಅಧ್ಯಕ್ಷ ಕ್ಯಾಚ್‌ಜಿನ್‌ಸ್ಕಿ ಭಾರತದ ಉತ್ತಮ ಗೆಳೆಯರಾಗಿದ್ದರು. ಉಭಯ ದೇಶಗಳ ಸಂಬಂಧ ಸುಧಾರಣೆಗೆ ಅವಿರತವಾಗಿ ಶ್ರಮಿಸಿದ್ದರು ಎಂದು ಹೇಳಿದ್ದಾರೆ.