ಕೇಂದ್ರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ವೈಯಕ್ತಿಕ ಕಾರಣಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ.ಕೆನಡಾದ ಪತ್ನಿಗೆ ವಿಚ್ಚೇದನ ನೀಡಿದ ನಂತರ, ಕಾಶ್ಮಿರಿ ಸೌಂದರ್ಯಕಾರ್ತಿಯೊಂದಿಗೆ ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
54 ವರ್ಷ ವಯಸ್ಸಿನ ತರೂರ್ ಅವರ ಹತ್ತಿರದ ಮೂಲಗಳ ಪ್ರಕಾರ, ವರದಿಗಳ ಬಗ್ಗೆ ತರೂರ್ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದು, ಮಾಧ್ಯಮಗಳು ತಮ್ಮ ವೈಯಕ್ತಿಕ ಬದುಕನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ.ತಮ್ಮ ಮದುವೆಯ ಬಗ್ಗೆ ಬಹಿರಂಗ ಮಾಡುವ ಸಮಯ ಬಂದಾಗ ಘೋಷಿಸಲಾಗುವುದು ಎಂದು ತಿಳಿಸುವುದಾಗಿ ಹೇಳಿದ್ದಾರೆ.
ದುಬೈಯಲ್ಲಿ ನೆಲೆಸಿರುವ ಕಾಶ್ಮಿರಿ ಕುಟುಂಬಕ್ಕೆ ಸೇರಿದ ಸೌಂದರ್ಯಕಾರ್ತಿ ಸುನಂದಾ ಅವರಿಗೆ ತರೂರ್ ಮದುವೆ ಪ್ರಸ್ತಾಪ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆನಡಾದ ಸರಕಾರಿ ಸೇವೆಯಲ್ಲಿರುವ ಎರಡನೇ ಪತ್ನಿ ಕ್ರಿಸ್ತಾ ಗಿಲೆಸ್ ಅವರೊಂದಿಗಿನ ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿದೆ.ಕೋಲ್ಕತಾದ ಶಾಲಾಗೆಳತಿ ತಿಲೋತ್ತಮ ಮುಖರ್ಜಿ, ಶಶಿ ತರೂರ್ ಅವರ ಮೊದಲ ಪತ್ನಿಯಾಗಿದ್ದರು.