ನಗರದ ಘಾಜಿಪುರ್ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಹಿಳೆಯೊಬ್ಬಳನ್ನು ಅಪರಿಚಿತರು ಅತ್ಯಾಚಾರವೆಸಗಿ, ಏಳನೇ ಮಹಡಿಯಿಂದ ಕೆಳಗೆಸೆದಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಾರ್ಟ್‌ಮೆಂಟ್‌ನ ಹೊರಆವರಣದಲ್ಲಿ ರಕ್ತದ ಮಡಿಲಿನಲ್ಲಿ ಬಿದ್ದಿದ್ದ 20 ವರ್ಷದ ಯುವತಿಯನ್ನು ಭಧ್ರತಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರಾದರೂ ಕೆಲ ಸಮಯದ ನಂತರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿಗೆ ಮುನ್ನ ಯುವತಿ ಕೆಲ ಆರೋಪಿಗಳ ಹೆಸರುಗಳನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಮೃತಳಾದ ಯುವತಿ ಖ್ಯಾಸಗಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋನುಸಿಂಗ್ ಅವರನ್ನುಭೇಟಿ ಮಾಡಲು, ಮೃತಳಾದ ಯುವತಿ ಮತ್ತೊಬ್ಬ ಯುವತಿಯೊಂದಿಗೆಏಳನೇ ಮಹಡಿಯಲ್ಲಿರುವ ಕೋಣೆಗೆ ತೆರಳಿದ್ದಳು ಎಂದು ಭಧ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಯವತಿಯನ್ನು ಆರೋಪಿಗಳು, ಮೊದಲು ಅತ್ಯಾಚಾರವೆಸಗಿ ನಂತರ ಅವಳನ್ನು ಏಳನೇ ಮಹಿಡಿಯಿಂದ ಎಸೆದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹೇಳಿದ್ದಾರೆ.