ರಾಜ್ಯಸಭೆಯ 100 ಸದಸ್ಯರು ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದು,ಶೇ.50 ರಷ್ಟು ಸದಸ್ಯರ ಸಂಪತ್ತು ಕೋಟಿಗೆ ಮಿಗಿಲಾಗಿದೆ. ಮಹಾರಾಷ್ಟ್ರದ ಸಂಸದ ರಾಹುಲ್ ಬಜಾಜ್ ಅತಿ ಶ್ರೀಮಂತ ಸದಸ್ಯರಾಗಿದ್ದಾರೆ.
ಖ್ಯಾತ ಉದ್ಯಮಿ ರಾಹುಲ್ ಬಜಾಜ್ 300 ಕೋಟಿ ರೂಪಾಯಿಗಳಿಗೆ ಮೀರಿದ ಸಂಪತ್ತನ್ನು ಘೋಷಿಸಿದ್ದಾರೆ. ಕರ್ನಾಟಕದ ಜನತಾ ದಳ(ಜಾತ್ಯಾತಿತ)ಸಂಸದ ಎಂ.ಎ.ಎಂ ರಾಮಾಸ್ವಾಮಿ ಮತ್ತು ಕಾಂಗ್ರೆಸ್‌ನ ಟಿ.ಸುಬ್ಬಿರಾಮನಿ ರೆಡ್ಡಿ (ಆಂಧ್ರಪ್ರದೇಶ)ತಲಾ 278 ಕೋಟಿ ರೂಪಾಯಿ ಹಾಗೂ 272 ಕೋಟಿ ರೂಪಾಯಿ ಸಂಪತ್ತು ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಮತ್ತು ಉಚ್ಚಾಟಿತ ನಾಯಕ ಅಮರ್‌ಸಿಂಗ್ ಕ್ರಮವಾಗಿ 215 ಕೋಟಿ ರೂಪಾಯಿ ಮತ್ತು 79 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದಾರೆ.