ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಆರ್‌ಪಿಎಫ್ ಸಿಬ್ಬಂದಿಗಳಿಗೆ ತರಬೇತಿ, ಸೌಕರ್ಯ ಕೊರತೆ (CRPF | Maoists attack | Dantewada | P Chidambaram)
Bookmark and Share Feedback Print
 
ಇತ್ತೀಚೆಗಷ್ಟೇ ದಂತೇವಾಡದಲ್ಲಿ ನಕ್ಸಲರಿಂದ ನಡೆದ 75 ಸಿಆರ್‌ಪಿಎಫ್ ಸಿಬ್ಬಂದಿಗಳ ಮಾರಣಹೋಮದ ಕುರಿತು ಪಡೆಯ ಆಂತರಿಕ ವರದಿಗಳು ಸಿದ್ಧವಾಗಿದ್ದು, ಅದರ ಪ್ರಕಾರ ತರಬೇತಿಯ ಕೊರತೆ, ಕೆಲಸದ ಒತ್ತಡ ಮತ್ತು ಸಂವಹನ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕಾರ್ಯಾಚರಣೆ ವಿಫಲವಾಗಿದೆ ಎಂದು ಹೇಳಲಾಗಿದೆ.

ಸಿಆರ್‌ಪಿಎಫ್ ಕಾರ್ಯಾಚರಣೆ ಸಂದರ್ಭದಲ್ಲಿ ಹೆಚ್ಚು ಸಾವುಗಳು ಸಂಭವಿಸಲು ಶೂಟಿಂಗ್ ಅಭ್ಯಾಸದ ಕೊರತೆ, ಸಮರ್ಪಕ ಫೈರಿಂಗ್ ರೇಂಜ್‌ನಲ್ಲಿ ಎದುರಾದ ಸಮಸ್ಯೆಗಳೇ ಕಾರಣ ಎಂದು ಅರೆ ಸೇನಾಪಡೆಯ ಹಿರಿಯ ಅಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಸಿಆರ್‌ಪಿಎಫ್ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿರುವ ರೀತಿ ಕುರಿತು ಒಬ್ಬ ಹಿರಿಯ ಅಧಿಕಾರಿ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದ ನಂತರ ಹಲವು ಸುತ್ತುಗಳ ಸಭೆ ನಡೆಸಿದ ಪಡೆಯ ಫೀಲ್ಡ್ ಕಮಾಂಡರುಗಳು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಇತ್ತೀಚೆಗಷ್ಟೇ ಚಂಡೀಗಢದ ದಂತೇವಾಡದಲ್ಲಿ 76 ಭದ್ರತಾ ಸಿಬ್ಬಂದಿಗಳನ್ನು ಸಾವಿರಾರು ನಕ್ಸಲರು ಸೇರಿ ಗುಂಡಿಕ್ಕಿ ಕೊಂದು ಹಾಕಿದ್ದರು. ಇದಕ್ಕೆ ಸಿಬ್ಬಂದಿಗಳಿಗಿದ್ದ ತರಬೇತಿ ಕೊರತೆಯೇ ಕಾರಣ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಆದರೆ ಇದನ್ನು ಚಂಡೀಗಢ ಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖರು ತಳ್ಳಿ ಹಾಕಿದ್ದರು. ಸ್ವತಃ ಗೃಹ ಸಚಿವ ಪಿ. ಚಿದಂಬರಂ ಕೂಡ ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ತನಿಖಾ ವರದಿಗಳು ತರಬೇತಿ ಕೊರತೆಯಿಂದಾಗಿ ಹೆಚ್ಚಿನ ಸಾವು-ನೋವುಗಳು ಸಂಭವಿಸಿವೆ ಎಂದು ಹೇಳಿದ್ದು, ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.

ದಂತೇವಾಡಕ್ಕೆ ಭೇಟಿ ನೀಡಿದ್ದ ಚಿದಂಬರಂ, ನಕ್ಸಲರ ವಿರುದ್ಧ ಮಿಲಿಟರಿಯನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ವಾಯುಪಡೆಯನ್ನು ಬಳಸುವ ಸಾಧ್ಯತೆಗಳಿವೆ ಎಂದಿದ್ದರು. ಇದೀಗ ವಾಯುಪಡೆಯ ಮುಖ್ಯಸ್ಥರು ಈ ಸಾಧ್ಯತೆಯನ್ನೂ ತಳ್ಳಿ ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ