ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂತರಿಕ ಭದ್ರತೆ ಕುರಿತು ತೆಪ್ಪಗಿರಿ: ಸಚಿವರುಗಳಿಗೆ ಪ್ರಧಾನಿ (internal security | Manmohan Singh | Mamata Banerjee | Subodh Kant)
Bookmark and Share Feedback Print
 
ಆಂತರಿಕ ಭದ್ರತೆ ಕುರಿತು ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಎಲ್ಲಾ ಸಚಿವರುಗಳಿಗೆ ಸೂಚಿಸಿದ್ದಾರೆ ಎಂದು ಸರಕಾರಿ ಮೂಲಗಳು ಹೇಳಿವೆ.

ಪ್ರಧಾನಿಯವರ ಪರವಾಗಿ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಈ ಸುತ್ತೋಲೆಯನ್ನು ಕಳುಹಿಸಿದ್ದು, ಸಚಿವರು ಭಾನುವಾರ ಇದನ್ನು ಸ್ವೀಕರಿಸಿದ್ದಾರೆ.

ದೇಶದ ಆಂತರಿಕ ಸುರಕ್ಷತೆಯ ಕುರಿತು ತನ್ನ ಸಂಪುಟದ ಸಚಿವರುಗಳು ಯಾವುದೇ ಹೇಳಿಕೆಗಳನ್ನು ನೀಡಬಾರದು ಮತ್ತು ಈ ಕುರಿತು ಭಿನ್ನ ಅಭಿಮತಗಳು ಹೊರಗೆ ಬರಬಾರದು ಎನ್ನುವುದು ಪ್ರಧಾನ ಮಂತ್ರಿಯವರ ಅಭಿಲಾಷೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ರವಾನಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇಂತಹ ವಿಚಾರಗಳ ಕುರಿತು ಗೃಹ ಸಚಿವಾಲಯವು ಪ್ರತಿಕ್ರಿಯೆ ನೀಡುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಕ್ಸಲ್ ದಾಳಿಯ ಕುರಿತು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಮತ್ತು ಆಹಾರ ಪೂರೈಕಾ ಸಚಿವ ಸುಬೋಧ್ ಕಾಂತ್ ಸಹಾಯ್ ಮುಂತಾದ ಸಚಿವರುಗಳು ಹೇಳಿಕೆ ನೀಡಿದ ಬಳಿಕ ಪ್ರಧಾನ ಮಂತ್ರಿಯವರು ಈ ನಿರ್ದೇಶನವನ್ನು ಹೊತ್ತ ಸುತ್ತೋಲೆಯನ್ನು ನೀಡಲು ನಿರ್ಧರಿಸಿದರು ಎಂದು ಹೇಳಲಾಗಿದೆ.

ಸಿಪಿಎಂ ಈ ಪ್ರದೇಶದಲ್ಲಿ ಕನಿಷ್ಠ 200ರಷ್ಟು ಶಿಬಿರಗಳನ್ನು ತೆರೆದಿದೆ. ಅವರನ್ನು ಹಾಗೆ ಮಾಡಲು ಯಾಕೆ ಅವಕಾಶ ನೀಡಲಾಗಿದೆ ಎಂದು ಮಮತಾ ಇತ್ತೀಚೆಗಷ್ಟೇ ಪ್ರಶ್ನಿಸಿದ್ದರು.

ರಾಜ್ಯಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ನಕ್ಸಲ್ ಸಮಸ್ಯೆ ಬೆಳೆಯುತ್ತಿದೆ ಎಂಬುದನ್ನು ರಾಜ್ಯಗಳು ಅರಿತುಕೊಳ್ಳಬೇಕು. ರಾಜ್ಯಗಳು ಸಾಕಷ್ಟು ಅಭಿವೃದ್ಧಿ ಸಾಧಿಸಲು ವಿಫಲವಾಗಿರುವುದೇ ಇಂತಹ ಸಮಸ್ಯೆಗಳು ಉದ್ಭವಿಸಲು ಕಾರಣ ಎಂದು ಮತ್ತೊಬ್ಬ ಸಚಿವ ಸಹಾಯ್ ತಿಳಿಸಿದ್ದರು.

ಛತ್ತೀಸ್‌ಗಢದ ದಾಂತೇವಾಡದಲ್ಲಿನ ಅರಣ್ಯ ಪ್ರದೇಶದಲ್ಲಿ 76 ಭದ್ರತಾ ಸಿಬ್ಬಂದಿಗಳನ್ನು ಮಾವೋವಾದಿಗಳು ಕೊಂದು ಹಾಕಿದ ಬಳಿಕ ಪ್ರಧಾನ ಮಂತ್ರಿಯವರು ಈ ನಿರ್ದೇಶನವನ್ನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ