ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಸವಣ್ಣನವರ ತತ್ವಗಳು ಎಂದಿಗೂ ಪ್ರಸ್ತುತ:ಸೋನಿಯಾ (Sonia gandhi | Congress| karnataka)
Bookmark and Share Feedback Print
 
ಬಸವಣ್ಣನವರ ಆದರ್ಶಗಳು ದೇಶದ ಪ್ರತಿಯೊಬ್ಬ ಜನತೆ ಅನುಸರಿಸಿದಲ್ಲಿ, ದೇಶ ಶಾಂತಿ ನೆಮ್ಮದಿಯ ನೆಲೆವೀಡಾಗುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಭಾರತವನ್ನು ಜಾತಿ ಮತ ಪಂಥಗಳ ಹೆಸರಿನಲ್ಲಿ ವಿಛಿದ್ರಕಾರಕ ಶಕ್ತಿಗಳು ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿವೆ. ಅಂತಹ ಶಕ್ತಿಗಳನ್ನು ಸದೆಬಡೆಯಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ವಿವಿಧತೆಯಲ್ಲಿ ಏಕತೆಯ ಸಂಸ್ಕ್ರತಿಯನ್ನು ಹೊಂದಿರುವ ಅಖಂಡ ಭಾರತದ ಹೆಸರಿಗೆ ಮಸಿ ಬಳೆಯುವ ಕೃತ್ಯಗಳನ್ನು ವಿಫಲಗೊಳಿಸಲು ಯುವ ಸಮುದಾಯವನ್ನು ಜಾಗೃತಗೊಳಿಸಬೇಕಾಗಿದೆ. ಸಕಲ ಧರ್ಮಗಳ ಗುರುಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಡಬೇಕಾಗಿದೆ ಎಂದರು.

ಶಿವಯೋಗ ಮಂದಿರದಲ್ಲಿ ಅಖಿಲ್ ಭಾರತ ವೀರಶೈವ ಮಹಾಸಭಾ ಶತಮಾನೋತ್ಸವ ನಿಮಿತ್ಯ ಆಯೋಜಿಸಿದ ಸಮಾರಂಭದಲ್ಲಿ ಭಾಗವಹಿಸಿ ಸೋನಿಯಾ ಮಾತನಾಡುತ್ತಿದ್ದರು.

ದೇಶದ ಯುವಜನತೆಯನ್ನು ಸೈನಿಕರ ಮಾದರಿಯಲ್ಲಿ ಸಜ್ಜುಗೊಳಿಸಿ. ದುಷ್ಟಶಕ್ತಿಗಳ ಗುರಿಯನ್ನು ವಿಫಲಗೊಳಿಸಬೇಕಾಗಿದೆ.ಯುವ ಜನಾಂಗವನ್ನು ತ್ಯಾಗ, ಸಾಮಾಜಿಕ ಕಳಕಳಿ, ಮಾನವೀಯತೆ, ಸಾಮಾಜಿಕ ಸೇವೆಗೆ ಅಣಿಗೊಳಿಸಬೇಕಾಗಿದೆ ಎಂದು ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ