ಮಾತುಕತೆಗೆ ಆಹ್ವಾನ
ಜೈಪುರ: ಗುಜ್ಜಾರ್ ಸಮುದಾಯಕ್ಕೆ ರಾಜ್ಯದ ನೌಕರಿಯಲ್ಲಿ ಶೇ.5ರ ಮೀಸಲಾತಿ ನೀಡಬೇಕೆಂದು ಬೇಡಿಕೆ ಮುಂದಿಟ್ಟಿರುವ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಅವರನ್ನು ರಾಜಸ್ಥಾನ ಸರಕಾರ ಮಾತುಕತೆಗೆ ಆಹ್ವಾನಿಸಿದೆ. ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಅವರನ್ನು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.