ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾನಿಯಾಗೆ 61 ಲಕ್ಷ ವಧುದಕ್ಷಿಣೆ, ಮದುವೆಗೆ ಐವತ್ತೇ ಜನ..! (Ayesha Siddiqui | Shoaib Malik | Sania Mirza | Haq Mehr)
Bookmark and Share Feedback Print
 
PTI
ಇಬ್ಬರೂ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳ ವಿಶ್ವವಿಖ್ಯಾತ ಕ್ರೀಡಾಪಟುಗಳು, ಮದುವೆ ನಡೆದದ್ದು ಹೈದರಾಬಾದ್‌ನಲ್ಲಿ, ವರ ನೀಡಿದ ವಧುದಕ್ಷಿಣೆ 61 ಲಕ್ಷ ರೂಪಾಯಿಗಳು, ಮದುವೆಗೆ ಸೇರಿದ ಜನ ಕೇವಲ ಐವತ್ತು -- ಇದು ನಿನ್ನೆ ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಮಲಿಕ್ ನಡುವಿನ ಮದುವೆಯ ಸಂಕ್ಷಿಪ್ತ ವಿವರಣೆ.

ಮೊದಲ ಪತ್ನಿ ಆಯೇಶಾ ಸಿದ್ಧಿಕಿ ವಿಚ್ಛೇದನ, ಹಿಂದೂ ಸಂಘಟನೆಗಳ ತೀವ್ರ ವಿರೋಧ ಹೀಗೆ ಹತ್ತಾರು ಸಂಕಷ್ಟಗಳನ್ನು ದಾಟಿ ಕೊನೆಗೂ ಸಾನಿಯಾ ಮಿರ್ಜಾರನ್ನು ತನ್ನ ಎರಡನೇ ಪತ್ನಿಯನ್ನಾಗಿ ಶೋಯಿಬ್ ನಿನ್ನೆ ಸ್ವೀಕರಿಸಿದ್ದಾರೆ.

ಮದುವೆಗೆ ಕೇವಲ 50 ಮಂದಿ...
ಶೋಯಿಬ್ ಅವರ ಬಾವ ಇಮ್ರಾನ್ ಜಾಫರ್ ಪ್ರಕಾರ ಪಂಚತಾರಾ ಹೊಟೇಲ್ ತಾಜ್ ಕೃಷ್ಣಾದಲ್ಲಿ ನಡೆದ ಈ ಮದುವೆ ಸಮಾರಂಭಕ್ಕೆ ಒಟ್ಟು 50 ಮಂದಿ ಮಾತ್ರ ಹಾಜರಾಗಿದ್ದರು. 15 ಮಂದಿ ಶೋಯಿಬ್ ಕುಟುಂಬದವರು ಮತ್ತು 35 ಮಂದಿ ಸಾನಿಯಾ ಕುಟುಂಬಿಕರು ಇಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮ ಸಂಪೂರ್ಣ ಖಾಸಗಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಮದುವೆಯನ್ನು ಸರಳವಾಗಿ ಮುಗಿಸಲು ನಾವು ನಿರ್ಧರಿಸಿದ್ದೆವು. ಇದೀಗ ಮದುವೆ ಮುಗಿದಿದೆ. ಹಾಗಾಗಿ ನಾವು ನಿಟ್ಟುಸಿರು ಬಿಟ್ಟಿದ್ದೇವೆ ಎಂದು ಇಮ್ರಾನ್ ಹೇಳಿದ್ದಾರೆ.
PTI


61 ಲಕ್ಷ ವಧುದಕ್ಷಿಣೆಯಂತೆ..
ಮುಸ್ಲಿಂ ಸಮುದಾಯದಲ್ಲಿ ನಿಖಾ ಅಥವಾ ಮದುವೆ ಒಪ್ಪಂದ ಎಂದು ಬರೆಯಲಾಗುವ ಮದುವೆಯ ಸಂದರ್ಭದಲ್ಲಿ ವಧುದಕ್ಷಿಣೆ ನೀಡುವ ಪದ್ಧತಿಯಿದೆ. ಅದರಂತೆ ಸಾನಿಯಾಗೆ ಶೋಯಿಬ್ ಅವರು 61 ಲಕ್ಷ ರೂಪಾಯಿ ಡೌರಿ ನೀಡಿದ್ದಾರೆ. ಈ ಮೊತ್ತವನ್ನು ಮುಸ್ಲಿಮ್ ಸಮುದಾಯದಲ್ಲಿ 'ಹಕ್ ಮೆಹ್ರ್' ಎಂದು ಕರೆಯಲಾಗುತ್ತದೆ. ಪತಿಯ ಸಾವಿನ ನಂತರ ಅಥವಾ ವಿಚ್ಛೇದನ ಪಡೆದುಕೊಂಡ ನಂತರ ಪತ್ನಿಯ ಜೀವನಕ್ಕಾಗಿ ಇದನ್ನು ಬಳಸಬಹುದಾಗಿದೆ.

ಇಂದು ಮೆಹೆಂದಿ, ನಾಳೆ ಸಂಗೀತ್...
ನಿನ್ನೆ ಮದುವೆ, ಇಂದು ಮೆಹೆಂದಿ, ನಾಳೆ ಸಂಗೀತ್, ನಾಡಿದ್ದು ಆರತಕ್ಷತೆ. ಬರೋಬ್ಬರಿ ನಾಲ್ಕು ದಿನಗಳ ಅದ್ದೂರಿ ಕಾರ್ಯಕ್ರಮವಾಗಿ ಸಾನಿಯಾ - ಶೋಯಿಬ್ ವಿವಾಹ.

ಮದುವೆಗೆ ಕಡಿಮೆ ಜನರನ್ನು ಆಹ್ವಾನಿಸಲಾಗಿದ್ದರೂ, ಅದ್ದೂರಿಯಾಗಿಯೇ ನಡೆದಿತ್ತು. ಸಾಮಾನ್ಯವಾಗಿ ಮದುವೆಗಿಂತ ಹಿಂದಿನ ದಿನ ನಡೆಯುವ ಮೆಹೆಂದಿ ಕಾರ್ಯಕ್ರಮವು ಇಲ್ಲಿ ಮದುವೆಯ ಮರುದಿನ ನಡೆಯುತ್ತಿದೆ. ನಾಳೆ ಸಂಗೀತ್ ಎಂಬ ನೃತ್ಯ ಕಾರ್ಯಕ್ರಮ ನಡೆಯಲಿದೆ. ವಿವಾಹ ಕಾರ್ಯಕ್ರಮದ ಕೊನೆಯ ಅಂಗವಾಗಿ ಆರತಕ್ಷತೆ ನಡೆಯಲಿದೆ. ಇದಕ್ಕೆ ಸಾನಿಯಾ ತನ್ನ ಆಪ್ತರೆಲ್ಲರನ್ನೂ ಆಹ್ವಾನಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ