ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಳಗಾವಿ ವಿವಾದ; ಯಡಿಯೂರಪ್ಪ ಹೇಳಿಕೆಗೆ ಮಹಾರಾಷ್ಟ್ರ ಗರಂ (BS Yeddyurappa | Belgaum | Maharashtra | Karnataka)
Bookmark and Share Feedback Print
 
ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂಬ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.

ಕರ್ನಾಟಕದಲ್ಲಿ ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಮಹಾರಾಷ್ಟ್ರ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದೆ.

ಆದರೆ ಕರ್ನಾಟಕವು ಬೆಳಗಾವಿ ಮತ್ತಿತರ ಮರಾಠಿಗರು ಹೆಚ್ಚಾಗಿರುವ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದು, ಹೆಚ್ಚುವರಿ ಸ್ಥಾನಮಾನ ನೀಡುವ ಕುರಿತೂ ಪ್ರಸ್ತಾಪಿಸುತ್ತಿದೆ. ಬೆಳಗಾವಿಗೆ ಎರಡನೇ ರಾಜಧಾನಿಯನ್ನಾಗಿ ಘೋಷಿಸುವ ಪ್ರಸ್ತಾವನೆಯನ್ನು ಯಡಿಯೂರಪ್ಪ ಇತ್ತೀಚೆಗಷ್ಟೇ ಮಾಡಿದ್ದರು.

ಆದರೆ ಈ ಹೇಳಿಕೆಗೆ ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಬೆಳಗಾವಿ ಮತ್ತು ಕಾರವಾರಗಳು ರಾಜ್ಯದ ಭಾಗವೆಂದು ಮಹಾರಾಷ್ಟ್ರ ಸರಕಾರ ವಾದಿಸುತ್ತಿದ್ದು, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇನ್ನಷ್ಟೇ ಇತ್ಯರ್ಥವಾಗಬೇಕಿದೆ. ಹಾಗಾಗಿ ಯಡಿಯೂರಪ್ಪ ಅವರ ಹೇಳಿಕೆ ಅಸಮರ್ಥನೀಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಪ್ರತಿಕ್ರಿಯಿಸಿದ್ದಾರೆ.

ಅವರ ಹೇಳಿಕೆ ಅನಗತ್ಯವಾದದ್ದು. ಈ ಕುರಿತು ನಾವು ಕಾನೂನು ಅವಲಂಬನೆಯನ್ನು ಅನುಸರಿಸುತ್ತೇವೆ ಎಂದು ಎನ್‌ಸಿಪಿ ನಾಯಕ ಹಾಗೂ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಹೇಳಿದ್ದಾರೆ.

ಆದರೆ ಶಿವಸೇನೆ ಖಾರವಾಗಿ ಪ್ರತಿಕ್ರಿಯಿಸಿದೆ. ಪಕ್ಷದ ನಾಯಕ ದಿವಾಕರ್ ರಾವುತ್ ಅವರು ಮಾತನಾಡುತ್ತಾ, ಬೆಳಗಾವಿಯಲ್ಲಿನ ಲಕ್ಷಾಂತರ ಮಂದಿ ಮರಾಠಿ ಭಾಷಿಗರ ಮೇಲೆ ಕರ್ನಾಟಕ ಸರಕಾರ ಹೇರಲು ಯತ್ನಿಸುವ ಯಾವುದೇ ನಿಲುವನ್ನು ತಮ್ಮ ಪಕ್ಷವು ವಿರೋಧಿಸುತ್ತದೆ ಎಂದಿದ್ದಾರೆ.

ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಐದು ದಶಕಗಳಿಗೂ ಹಳೆಯದು. ರಾಜ್ಯಗಳ ಪುನರ್ ರಚನೆಯ ನಂತರ ಕರ್ನಾಟಕದಲ್ಲಿನ ಮರಾಠಿ ಭಾಷಿಗರಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಬೇಡಿಕೆಯಿಡಲಾಗುತ್ತಿದೆ.

ಕರ್ನಾಟಕವು ಕಳೆದ ವರ್ಷ ಬೆಳಗಾವಿಯಲ್ಲಿ ವಿಧಾನಸಭೆಯ ಐದು ದಿನಗಳ ವಿಶೇಷ ಅಧಿವೇಶನವನ್ನೂ ನಡೆಸಿತ್ತು. ಇದಕ್ಕೂ ಕೂಡ ಮರಾಠಿ ಭಾಷಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ