ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುತ್ರಿಗೇ ಗರ್ಭಾಧಾನ; ಶಿಕ್ಷೆಗಾಗಿ ಕಾಯುತ್ತಿದ್ದಾನೆ ಪಾಪಿ ತಂದೆ (Man rapes daughter, fathers child)
Bookmark and Share Feedback Print
 
ತನ್ನ ಮಗಳನ್ನೇ ನಿರಂತರ ಅತ್ಯಾಚಾರ ನಡೆಸಿ ಮಗುವೊಂದನ್ನು ಕರುಣಿಸಿದ್ದ ತಂದೆಯೊಬ್ಬನ ಕೃತ್ಯಗಳು ಬಹುತೇಕ ಸಾಬೀತಾಗಿದ್ದು, ಇನ್ನೇನು ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಅದಕ್ಕಾಗಿ ಆತ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ.

ಆದರೆ ಐದು ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಹುಡುಗಿಗೆ ಇದೀಗ 21 ತುಂಬಿದ್ದು, ಕಳೆದೊಂದು ವರ್ಷದಿಂದ ಮೌನಕ್ಕೆ ಶರಣಾಗಿದ್ದಾಳೆ.

ಐದು ವರ್ಷಗಳ ಹಿಂದಿನ ಘಟನೆಯಿದು. 16ರ ಹರೆಯದ ಬಾಲಕಿ ಸೀಮಾಳ (ಹೆಸರು ಬದಲಾಯಿಸಲಾಗಿದೆ) ತಂದೆ ಶಾಂತಾರಾಂ ಮತ್ತು ತಾಯಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ವೈವಾಹಿಕ ಜೀವನವನ್ನು ಮುಂದುವರಿಸುವ ನಿಟ್ಟಿನಲ್ಲಿ ಸೀಮಾಳ ತಾಯಿ ಮತ್ತೊಂದು ಯತ್ನ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ 2005ರಲ್ಲಿ ಜತೆಯಾಗಿ ವಾಸಿಸುತ್ತಿದ್ದಾಗ, ತಾಯಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸ್ವಂತ ತಂದೆಯಿಂದಲೇ ಸೀಮಾ ಮೊದಲ ಬಾರಿ ಅತ್ಯಾಚಾರಕ್ಕೀಡಾಗಿದ್ದಳು.

ಈ ಅತ್ಯಾಚಾರ ಹಲವು ಬಾರಿ ಮುಂದುವರಿದಿತ್ತು. ಇದರ ಕುರಿತು ಎಲ್ಲಾದರೂ ಬಾಯ್ಬಿಟ್ಟರೆ ಕೊಂದೇ ಹಾಕುವುದಾಗಿ ತಂದೆಯಿಂದ ಬೆದರಿಕೆ ಕೂಡ ಬಂದಿತ್ತು. ತಿಂಗಳ ನಂತರ ತಾಯಿ ತನ್ನ ಮಗಳ ಜತೆ ತವರು ಮನೆಗೆ ಹೊರಟು ಹೋಗಿದ್ದರು. ಆದರೆ ತನ್ನ ಮಗಳು ಗರ್ಭಿಣಿ ಎಂಬ ವಿಚಾರ ಅವರಿಗೆ ತಿಳಿದಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಸೀಮಾ, ತಾನು ಗರ್ಭಿಣಿಯೆಂದು, ತಂದೆಯೇ ಅತ್ಯಾಚಾರ ಮಾಡಿದ್ದರೆಂದೂ ತಾಯಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು.

ಆರಂಭದಲ್ಲಿ ಅತ್ಯಾಚಾರ ಪ್ರಕರಣವನ್ನೇ ತಳ್ಳಿ ಹಾಕಿದ್ದ ಶಾಂತಾರಾಂ, ಬಳಿಕ ಮಗಳ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ನಡೆದಿತ್ತು; ಅದು ಅತ್ಯಾಚಾರವಾಗಿರಲಿಲ್ಲ ಎಂದು ವಾದಿಸತೊಡಗಿದ್ದ. ಆದರೂ ಹುಟ್ಟಿರುವ ಮಗು ತನ್ನ ಮತ್ತು ಮಗಳ ದೈಹಿಕ ಸಂಪರ್ಕದಿಂದ ಆಗಿರುವುದಲ್ಲ ಎಂದಿದ್ದ. ಆದರೆ ಪಾಪಿ ತಂದೆಯ ಎಲ್ಲಾ ವಾದಗಳೂ ನ್ಯಾಯಾಲಯದಲ್ಲಿ ಯಾವುದೇ ಬೆಲೆಯನ್ನು ಪಡೆದುಕೊಂಡಿರಲಿಲ್ಲ.

ಮಗುವಿಗೆ ಜನ್ಮ ನೀಡಿದ ವರ್ಷದ ನಂತರ 2006ರ ಏಪ್ರಿಲ್ 25ರಂದು ಶಾಂತಾರಾಂ ವಿರುದ್ಧ ಮಗಳು ಸೀಮಾ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಶಾಂತಾರಾಂ ವಿರುದ್ಧದ ವಿಚಾರಣೆ ಮುಕ್ತಾಯಗೊಂಡಿದ್ದು, ಏಪ್ರಿಲ್ 19ರಂದು ತೀರ್ಪು ಹೊರ ಬರಲಿದೆ.
ಸಂಬಂಧಿತ ಮಾಹಿತಿ ಹುಡುಕಿ